Posts

ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ

Image
 ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ ಕುಂದಾಪುರ : ಡಿಸೆಂಬರ್ 29ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್  ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ಶುಭಕರಾಚಾರಿ ವಹಿಸಿದ್ದು ಇವರು ಶಿಬಿರವನ್ನುದ್ದೇಶಿಸಿ ಮಾತನಾಡಿದರು.  ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳು ಆಗಿರುವ ಅರುಣ ಎ. ಎಸ್,ರಾಮಚಂದ್ರ ಆಚಾರ್ ಮತ್ತು ಅಣ್ಣಪ್ಪ ಇವರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರಕಾರ್ಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಂ. ಗೊಂಡ,ಅನೂಪ್ ಕುಮಾರ್ ಶೆಟ್ಟಿ, ಸಮೂಹ ಸಂಪನ್ಮೂಲ ಕೇಂದ್ರ ಹಾಲಾಡಿ, ಜನಾರ್ದನ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಾಲಾಡಿ,ಗುರುಪ್ರಸಾದ್ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ನಾಗರಾಜ್ ಗೋಳಿ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ಗಣೇಶ ಎಮ್ ಅಧ್ಯಕ್ಷರು ಎಸ್ ಡಿ ಎಂ ಸಿ,ಸ.ಹಿ.ಪ್ರಾ.ಶಾಲೆ ಮುದೂರಿ, ಸಂಜೀವ ಮುಖ್ಯೋಪಾಧ್ಯಾಯರು ಸ ಹಿ ಪ್ರಾ ಶಾಲೆ ಮೂದೂರಿ ಮತ್ತು ರಮೇಶ್ ನಾಯ್ಕ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಮುದೂರಿ ...

ಡಿಸೆಂಬರ್ 24 : ವಿದ್ಯಾರ್ಥಿಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ

Image
ಡಿಸೆಂಬರ್ 24 : ವಿದ್ಯಾರ್ಥಿಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ  ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ  ಕುಂದಾಪುರ: ಡಿಸೆಂಬರ್ 24 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸೊಸೈಟಿ (ರಿ), ಬೆಂಗಳೂರು ಇವರಿಂದ 2022-23 ಕಲಿಕಾ ವರ್ಷದ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಆಯ್ಕೆ ಮಾಡಿದ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಮಾನ್ಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಕೂಲ್ ಆಫ್ ಮೆಡಿಸಿನ್, ಟೆಕ್ಸಾಸ್ ಎ&ಎಂ ಯೂನಿವರ್ಸಿಟಿ, ಯು.ಎಸ್.ಎ. ಇಲ್ಲಿನ  ಪ್ರೊ. ಅಶೋಕ್ ಕೆ.ಶೆಟ್ಟಿ   ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ವಹಿಸಲಿದ್ದಾರೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಸೊಸೈಟಿ (ರಿ), ಬೆಂಗಳೂರು ಇದರ ಪ್ರಕಟಣೆ ತಿಳಿಸಿದೆ.

23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23

23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ  ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23 ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿ ಎಂಬಲ್ಲಿ ನಡೆಯಲಿದೆ.  ಡಿಸೆಂಬರ್ 23ರಂದು ಶಿಬಿರದ ಉದ್ಘಾಟನಾ ನಡೆಯಲಿದೆ. ಶಿಬಿರವನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರು ಕುಂದಾಪುರ ಕ್ಷೇತ್ರ ಇವರು ಉದ್ಘಾಟಿಸಲಿದ್ದಾರೆ.  25ರಂದು ಕಸ್ತೂರಬಾ ಆಸ್ಪತ್ರೆ ಮಣಿಪಾಲ  ಮತ್ತು  ಹಾಲಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು  ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ  ಗ್ರಾಮಸ್ಥರಿಗೆ ನುರಿತ ವೈದ್ಯರಿಂದ ಬ್ರಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 24,26,26,27,28ರಂದು ವಿವಿಧ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 29ರಂದು ಶಿಬಿರ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ

Image
  ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ  ಕುಂದಾಪುರ: ಡಿಸೆಂಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ  ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಎಜುಕೇಶನ್ ಇದರ ಸಾಂಸ್ಕೃತಿಕ ಸಹಕಾರ ಸಮಿತಿಯ  ಸಹಯೋಗದಲ್ಲಿ ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.  ರಾಷ್ಟ್ರೀಯ ಕಥಕ್ ನೃತ್ಯ ಕಲಾವಿದ ಪಂಡಿತ್ ರಾಜೇಂದ್ರ ಗಂಗಾನಿ ಅವರು ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಜನಮನ ಸೆಳೆಯಿತು. ಮೋಹಿತ್ ಗಂಗಾನಿಯವರು ತಬಲಾ, ವಿನೋದ್ ಕುಮಾರ್ ಅವರು ಹಾಡುಗಾರಿಕೆ ಮತ್ತು ಹಾರ್ಮೋನಿಯಂ, ಕಿಶೋರ್ ಕುಮಾರ್ ಮೃದಂಗ ಮತ್ತು ರವಿಶಂಕರ್ ಶರ್ಮಾ ಅವರು ಸಿತಾರ್ ವಾದನದಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ , ಕಲಾ ಸಂಘದ ಸಂಯೋಜಕರಾದ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕಿ  ಸುಮಾ ಸ್ವಾಗತಿಸಿ ವಂದಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್ 2022-23

Image
  ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್ 2022-23 ಕುಂದಾಪುರ ಡಿಸೆಂಬರ್ 20ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್ 2022-23 ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿಶ್ವಸ್ಥರಾದ ಪ್ರಕಾಶ್ ಟಿ.ಸೋನ್ಸ್ ಅವರು ಸಾವಿರಾರು ಮಕ್ಕಳು ಕರಾಟೆಯಿಂದ ಶಿಸ್ತು ಕಲಿಯುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಪಡೆದ ಕರಾಟೆ ಪಟುಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಆರ್ಥಿಕ ನೆರವು ನೀಡಬೇಕು ಎಂದು ಅಭಿಪ್ರಾಯಪಟ್ಟರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬ್ಲ್ಯಾಕ್ ಬೆಲ್ಟ್ 5ಡ್ಯಾನ್ ಸಂದೀಪ್ ಪೂಜಾರಿ ದಕ್ಷಿಣ ಕನ್ನಡ ಉಡುಪಿ ಕರಾಟೆ ಅಧ್ಯಕ್ಷ ಪ್ರವೀಣ್ ಕುಮಾರ್, ಮಂಗಳೂರು ವಿಶ್ವವಿದ್ಯಾಲಯ ಸಹಾಯಕ ದೈಹಿಕ ನಿರ್ದೇಶಕ ಹರಿದಾಸ್ ಕೂಳೂರು ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಶಂಕರನಾರಾಯಣ. ಕೆ ಸ್ವಾಗತಿಸಿದರು. ದೈಹಿಕ ನಿರ್ದೇಶಕಿ ವನಿತಾ ವಂದಿಸಿದರು. ವಿದ್ಯಾರ್ಥಿನಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.

ವಿಶ್ವ ಮಾನವ ಹಕ್ಕುಗಳ ದಿನಾಚರಣೆ

Image
 ವಿಶ್ವ ಮಾನವ ಹಕ್ಕುಗಳ ದಿನಾಚರಣೆ  ಡಿಸೆಂಬರ್ 10ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ  ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ "ವಿಶ್ವ ಮಾನವ ಹಕ್ಕುಗಳ ದಿನಾಚರಣೆ" ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುಕ್ತಾಬಾಯಿ "ಮಾನವ ಹಕ್ಕುಗಳು ಮತ್ತು ಯುವಜನತೆ" ಎಂಬ ವಿಷಯದ ಕುರಿತು ಮಾತನಾಡಿ ಯಾವುದೇ ಕಾರಣಕ್ಕೂ ಕೆಟ್ಟ ಅಭ್ಯಾಸಗಳಿಂದ ದೂರ ಇದ್ದು ವಿದ್ಯಾರ್ಥಿಜೀವನವನ್ನು ಸಾಕಾರಗೊಳಿಸುವದರ ಜೊತೆಗೆ ಒಳ್ಳೆಯ ಅಧಿಕಾರಿಗಳಾಗಿ ಸಮಾಜದ ಋಣವನ್ನು ತೀರಿಸಲು ನಿಮ್ಮ ಪ್ರಯತ್ನ ಇರಬೇಕು. ಮಾದಕವಸ್ತು ವ್ಯಸನ , ಮೊಬೈಲ್ ಗೀಳಿಗೆ ಒಳಗಾಗಬೇಡಿ. ಅದು ನಮ್ಮ ಒಳ್ಳೆಯ ಹವ್ಯಾಸಗಳನ್ನು ನಾಶಮಾಡಿ ಸುಸ್ಥಿರ ಜೀವನವನ್ನು ಕಸಿದುಕೊಳ್ಳುವ ಮೊದಲೇ ಜಾಗೃತರಾಗಬೇಕು ಎಂದು ಹೇಳಿದರು. ಕೆಲವು ಮೂಲ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ನೆಹರು ಯುವ ಕೇಂದ್ರ ಉಡುಪಿ ಜಿಲ್ಲಾ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಮಾನವ ಹಕ್ಕುಗಳ ಕೋಶದ ಸಂಯೋಜಕರಾದ ಪ್ರೊ. ಗೋಪಾಲ್ ಕೆ ಸ್ವಾಗತಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ವಂದಿಸಿದರು.  ವಿದ್ಯಾರ್ಥಿನಿಯರಾದ ಚಂದ್ರಿ...

ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ಸಮಗ್ರ ಪ್ರಶಸ್ತಿ

Image
  ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಪುರುಷರ ಮತ್ತು ಮಹಿಳಾ  ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ಸಮಗ್ರ ಪ್ರಶಸ್ತಿ ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಕುಸ್ತಿ ಪಂದ್ಯಾಟದಲ್ಲಿ ಪುರುಷರ ಮತ್ತು ಮಹಿಳಾ  ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ಸಮಗ್ರ ಪ್ರಶಸ್ತಿಯೊಂದಿಗೆ ಪ್ರಥಮ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಮಂಗಳೂರಿನ ಎಸ್.ಜಿ.ಸಿ ಕಾಲೇಜು, ತೃತೀಯ ಸ್ಥಾನವನ್ನು ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು ಮತ್ತು ಚತುರ್ಥ ಸ್ಥಾನವನ್ನು ಮಂಗಳೂರಿನ ಕಾರ್ ಸ್ಟ್ರೀಟ್ ನ ಜಿ.ಎಫ್.ಜಿ.ಸಿ ಕಾಲೇಜು ಪಡೆಯಿತು. ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ವಿಶ್ವವಿದ್ಯಾಲಯ ಕಾಲೇಜು ಮಂಗಳೂರು, ತೃತೀಯ ಸ್ಥಾನವನ್ನು ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ, ಚತುರ್ಥ ಸ್ಥಾನವನ್ನು  ಉಜಿರೆಯ ಎಸ್.ಡಿ.ಎಂ ಕಾಲೇಜು ಪಡೆಯಿತು. ಬಹುಮಾನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ  ಉಡುಪಿ ಜಿಲ್ಲಾ ಪೋಲಿಸ್ ಅಧಿಕಾರಿ ಆದರ್ಶ್ ಕುಮಾರ್ ಶೆಟ್ಟಿ, ವಕ್ವಾಡಿಯ ಗುರು ಹನುಮ ಕೇಟರಿಂಗ್ ಇದರ ಭರತ್ ಕುಮಾರ್ ಶೆಟ್ಟಿ, ಕಾಂತಾರ ಸಿನಿಮಾ ಖ್ಯಾತಿಯ ರಕ್ಷಿತ್ ಶೆಟ್ಟಿ, ವೀಕ್ಷಕ...

ಕುಸ್ತಿ ಪಂದ್ಯಾವಳಿ

Image
 ಕುಸ್ತಿ ಪಂದ್ಯಾವಳಿ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಡಿಸೆಂಬರ್ 8ಮತ್ತು 9ರಂದು ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿ ನಡೆಯುತ್ತಿದೆ.

ಏಡ್ಸ್ ಜಾಗೃತಿ ಕಾರ್ಯಕ್ರಮ

ಏಡ್ಸ್ ಜಾಗೃತಿ ಕಾರ್ಯಕ್ರಮ ಕುಂದಾಪುರ, ಡಿ.07: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯೂತ್ ರೆಡ್ ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ಅವರ ಸಹಯೋಗದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಉಮೇಶ್ ಪುತ್ರನ್,ನಿರ್ದೇಶಕರು ಚಿನ್ಮಯ್ ಆಸ್ಪತ್ರೆ ಮತ್ತು ಉಪ ಸಭಾಪತಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರು ಮಾತನಾಡಿ ಕೆಲವು ವರ್ಷಗಳ ಹಿಂದೆ ಏಡ್ಸ್ ಎನ್ನುವುದು ಒಂದು ದೊಡ್ಡ ಕಾಯಿಲೆಯಾಗಿತ್ತು. ಈಗಿನ ದಿನಗಳಲ್ಲಿ ಏಡ್ಸ್ ಅನ್ನು ಸಹ ನಿವಾರಿಸುವಂತಹ ಔಷಧಿಗಳು ಉಚಿತವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತದೆ. ನಾವು ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಏಡ್ಸ್ ಅಥವಾ ಹೆಚ್.ಐ.ವಿ ರೋಗಿಗಳಲ್ಲಿರುವ ಕೀಳಲಿರಿಮೆಯನ್ನು ಹೋಗಲಾಡಿಸುವ ಕೆಲಸ ಸಮಾಜ ಮಾಡಬೇಕು ಎಂದು ಹೇಳಿದರು. ಅಲ್ಲದೆ ಹೆಚ್.ಐ.ವಿ ಮತ್ತು ಏಡ್ಸ್ ಗಳ ನಡುವೆ ಇರುವ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿ ಹೇಳಿದರು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಯಕರ್ ಶೆಟ್ಟಿ, ಸಭಾಪತಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯದ ಶುಭಕರ ಆಚಾರ್ಯ, ಕಾರ್ಯಕ್ರಮದ ಸಂಚಾಲಕರಾದ ಸತ್ಯನಾರಾಯಣ ಮತ್ತು ವಿದ್ಯಾರಾಣಿ ಉಪಸ್ಥಿತರಿದ್ದರು.  ವಿದ್ಯಾರ್ಥಿನಿ ಅ...

ಮಹಿಳಾ ವೇದಿಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ

Image
  ಮಹಿಳಾ ವೇದಿಕೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ಈ ಭೂಮಿಗೆ ನಾವು ತಾಯಿಯ ಗರ್ಭದಿಂದ ಹೊರಗೆ ಬಂದಾಗ ಒಂದು ಹೆಣ್ಣಾಗಿ ಬಂದಿದ್ದಕ್ಕೆ ಯಾವತ್ತೂ ದೇವರಲ್ಲಿ ಚಿರಋಣಿಯಾಗಿರಬೇಕು' ಎಂದು ಡಾ. ಸೋನಿ ಡಿಕೋಸ್ಟ ಅವರು ಹೇಳಿದರು. ಅವರು ಇತ್ತೀಚಿಗೆ ಇಲ್ಲಿನ ಭಂಡಾರಕಾರ್ಸ್ ಕಾಲೇಜಿನ ಮಹಿಳಾ ವೇದಿಕೆಯವರು ಆಯೋಜಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.       ಮಾರ್ಚ್ 8ನೇ ತಾರೀಕು ಬಂದಾಗ ನಾವು ಪೇಪರಲ್ಲಿ, ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಎಲ್ಲಾ ಕಡೆಯಲ್ಲೂ ಮಹಿಳಾ ದಿನದ ಸೆಲೆಬ್ರೇಶನ್ ನೋಡಬಹುದು. ವರ್ಷದ 365 ದಿನಗಳಲ್ಲಿ ಒಂದು ದಿನ ಮಾತ್ರ ಹೆಣ್ಣಿಗೆ ಮಹತ್ವವನ್ನು ಕೊಡುತ್ತಾರೆ. ಆದರೆ ಹೆಣ್ಣಾಗಿ ಹುಟ್ಟಿದ ನಾವೆಲ್ಲರೂ ನಿಜವಾಗಿ ನಮ್ಮನ್ನೇ ನಾವು ಅಭಿನಂದಿಸಿಕೊಳ್ಳಬೇಕು. ನಮ್ಮಲ್ಲಿಯೇ ಒಂದು ರೀತಿಯ ಹೆಮ್ಮೆ ಇರಬೇಕು. ಹತ್ತು ಇಪ್ಪತ್ತು ವರ್ಷಗಳ ಹಿಂದೆ ಹೋದರೆ ಪುರುಷ ಪ್ರಧಾನ ಸಮಾಜ ಇತ್ತು. ಆದರೆ ಈಗ ಒಂದು ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೆ ಹೋಗಿದ್ದಾಳೆ. ಹೆಣ್ಣು ಮಕ್ಕಳು ಯಾವಾಗಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಬೇಕು ಎಂದು ಹೇಳಿದರು.       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎನ್. ಪಿ ನಾರಾಯಣ್ ಶೆಟ್ಟಿ,ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ವಹಿಸಿದ್ದರು.       ಈ ಸ...

ಸಂಸ್ಥಾಪಕರ ದಿನಾಚರಣೆ

Image
  ಸಂಸ್ಥಾಪಕರ ದಿನಾಚರಣೆ ಕಾಲೇಜಿನಲ್ಲಿ ಡಿಸೆಂಬರ್ 5ರಂದು ಸಂಸ್ಥಾಪಕರ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟಾಟಾ ಪವರ್ ಇಂಡಿಯಾದ ಟ್ರಾನ್ಸಮೀಶನ್ ಮತ್ತು ಡಿಸ್ಟ್ರಿಬ್ಯೂಶನ್ ಇದರ ಮಾಜಿ ಅಧ್ಯಕ್ಷ ಮಿನಿಷ್ ಧವೆ ಮಾತನಾಡಿ ನೆಮ್ಮದಿಯ ಮತ್ತು ಯಶಸ್ವಿ ಬದುಕು ಸಾಗಬೇಕಾದರೆ ಮುಖ್ಯವಾಗಿ ಸಂತೋಷ, ಕಠಿಣ ಪರಿಶ್ರಮ, ಮೊದಲು ಆದ್ಯತೆ ಮತ್ತು ವಿವೇಕ ಮತ್ತು ಜ್ಞಾನ ಉಳ್ಳವರು ಮಾತುಗಳನ್ನು ಕೇಳಬೇಕು. ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಕಾಲೇಜು ಸ್ಥಾಪಕರ ಉದಾತ್ತ ಧ್ಯೇಯಗಳನ್ನು ಅವರು ಮಕ್ಕಳಲ್ಲಿಯೂ ಇದೆ. ಅದೆ ಸಂಸ್ಕಾರ ಅವರ ಕುಟುಂಬದವರಲ್ಲಿ ಇದೆ. ಎಷ್ಟೋ ಜನರಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಪರಮಪೂಜ್ಯ ಶಾಂತಾರಾಮ್ ಭಂಡಾರ್ಕರ್ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು, ಸದಾನಂದ ಛಾತ್ರ, ದೇವಿದಾಸ ಕಾಮತ್, ರಾಜೇಂದ್ರ ತೋಳಾರ್ ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು.

World mental health day

Image
  World mental health day   Nov 9: World Mental Health day 2022 with the theme of  "Make mental health and wellbeing for all a global priority" was organised by the department of psychology at Bhandarkars' Arts and Science College here on 9th November 2022. Dr. Nithin Shetty, neuron psychiatrist was the chief guest if the program. Dr. Nithin Shetty acknowledged that the students of Bhandarkrs' about the importance of mental health.  Dr.N.P. Narayana Shetty, principal of Bhandarkars' art and science college, was presided over  the program. Rajeshwari, HOD of psychology department present over the program. Ambika, lecture of psychology, announced the winners.  Yajusha of 3rd BA compered the program. Kaushalya of 2nd BA welcomed the gathering.  Lavanya, of 3rd BA rendered vote of thanks.

ರಕ್ಷಕ-ಶಿಕ್ಷಕ ಸಂಘದ ಸಭೆ

Image
 ರಕ್ಷಕ-ಶಿಕ್ಷಕ ಸಂಘದ ಸಭೆ    ಬಿಸಿಕೆ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನವೆಂಬರ್ 12ರಂದು ರಕ್ಷಕ-ಶಿಕ್ಷಕ ಸಂಘದ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಪೋಷಕರು ಮತ್ತು ಮಕ್ಕಳು ನಡುವೆ ಎಲ್ಲಾ ರೀತಿಯಿಂದಲೂ ಒಳ್ಳೆಯ ಬಾಂಧವ್ಯವಿರಬೇಕು. ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಪೋಷಕರು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಮೇಸ್ತ ಕಾರ್ಯದರ್ಶಿ ಲಕ್ಷ್ಮಿಕಾಂತ ಮಡಿವಾಳ ಉಪಸ್ಥಿತರಿದ್ದರು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಸ್ವಾಗತಿಸಿದರು. ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರೂಪಿಸಿದರು.

ಯುಥ್ ರೆಡ್ ಕ್ರಾಸ್ :"ಸಂವಹನ ಕಲೆ" ಎಂಬ ವಿಷಯದ ಕುರಿತು ಉಪನ್ಯಾಸ

Image
ಯುಥ್ ರೆಡ್ ಕ್ರಾಸ್ :"ಸಂವಹನ ಕಲೆ" ಎಂಬ ವಿಷಯದ ಕುರಿತು ಉಪನ್ಯಾಸ    ಕುಂದಾಪುರ:ನ.9ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ "ಸಂವಹನ ಕಲೆ"ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ. ಹಯವದನ ಉಪಾಧ್ಯಾಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸಂವಹನ ಕಲೆ  ಕರಗತ ಮಾಡಿಕೊಳ್ಳಲು ಬೇಕಾದ ವಿಧಾನಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ಯುಥ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಸತ್ಯನಾರಾಯಣ, ಉಪನ್ಯಾಸಕಿ ಶ್ವೇತಾ ಮತ್ತು ಉಪನ್ಯಾಸಕ ವಿದ್ಯಾಧರ ಉಪಸ್ಥಿತರಿದ್ದರು. ಯುಥ್ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಣಿ ವಿದ್ಯಾರಾಣಿ ಕಾರ್ಯಕ್ರಮ ನಿರೂಪಿಸಿದರು.

Founders Day Celebration

Image
December 5th Founders Day Celebration  BCK: Foundars Day of Bhandarkars' Arts & Science College will be held on December 5th 2022. Sri Shantharam A.Bhandarkar, President of Bhandarkars' Arts & Science College Trust (R) Will be the president of the programme. Sri Manish Dave,  Ex-President of Transmission and Distribution, TATA Power India will be give the Founders Day Oration. 

ಸಂವಿಧಾನ ದಿನಾಚರಣೆ

Image
  ಸಂವಿಧಾನ ದಿನಾಚರಣೆ  ಬಿಸಿಕೆ: ನವೆಂಬರ್ 26ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ,ಉಡುಪಿ ಮತ್ತು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ (ರಿ), ಕುಂದಾಪುರ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಕೀಲರ ಸಂಘದ ಅಧ್ಯಕ್ಷ  ಸೋಮನಾಥ ಹೆಗ್ಡೆ    ಮಾತನಾಡಿ ದೇಶದಲ್ಲಿ ಅನಕ್ಷರತೆ ಮತ್ತು ವೈ ವೈವಿಧ್ಯತೆಯನ್ನು ಹೊಂದಿದ ನಮ್ಮ ದೇಶದಲ್ಲಿ ಎಲ್ಲರನ್ನೂ ಒಂದಾಗಿಸುವ ಸಂವಿಧಾನದ ಅಗತ್ಯ ಇತ್ತು.  ಈ ಸಂದರ್ಭದಲ್ಲಿ ಸಂವಿಧಾನ ಸಮಿತಿಯನ್ನು ರಚಿಸಲಾಯಿತು. ನಂತರ ಕರಡು ಸಮಿತಿ ರಚಿಸಲಾಯಿತು. ಭಾರತದ ಸಂವಿಧಾನ ರಚನಾ ಸಮಿತಿಯು ವಿವಿಧ ದೇಶಗಳಿಗೆ ಸಂಚರಿಸಿ  ಭಾರತದ ಸಂವಿಧಾನ  ರಚಿಸಲಾಯಿತು ಎಂದು ಹೇಳಿದರು. ಜನತೆಗೆ ಪೂರಕ ಶ್ರೇಷ್ಠ ಸಂವಿಧಾನ ನಮ್ಮ ಭಾರತ ದೇಶದ್ದಾಗಿದೆ. ನಾವು ಮೊದಲು ಮನುಷ್ಯರಾಗಬೇಕು. ಸಂವಿಧಾನವನ್ನು ಗೌರವಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹಿರಿಯ ವಕೀಲರಾದ ಸಂತೋಷ್ ಕುಮಾರ್ ಶೆಟ್ಟಿ ಗಿಳಿಯಾರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ಸೇವೆಯನ್ನು ನೀಡಲಾಗುತ್ತಿದೆ.   ಸೂಕ್ತ ರೀತಿಯಲ್ಲಿ ಕಾನೂನು ಸೇವೆಯನ್ನು ನೀಡುವುದು ಇದರ ಉದ್ದೇಶವಾಗಿದೆ. ನಮಗೆ ಸ್ವಾತಂತ್ರ್ಯದ ಹಕ...

ಅಂತರ್ ಕಾಲೇಜು ಸಂಗೀತ ಸ್ಪರ್ಧೆ

  ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಡಿಸೆಂಬರ್ 2ರಂದು ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ನಡೆಯಲಿವೆ. ಶಾಸ್ತ್ರೀಯ ಹಾಡುಗಾರಿಕೆ, ಶಾಸ್ತ್ರೀಯ ವಾದ್ಯ ಸಂಗೀತ, ದಾಸ ಕೀರ್ತನೆ ಲಘು ಶಾಸ್ತ್ರೀಯ ಶೈಲಿ), ಸಮೂಹ ಗಾಯನ (ದೇಶಭಕ್ತಿ ಗೀತೆ), ಕನ್ನಡ ಭಾವಗೀತೆ, ಕನ್ನಡ ಜಾನಪದ ಗೀತೆ ಮತ್ತು ಚಿತ್ರಗೀತೆ (ಕನ್ನಡ ಅಥವಾ ಹಿಂದಿ) ( ಕರೋಕೆಗೆ ಅವಕಾಶವಿಲ್ಲ) ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಿಸೆಂಬರ್ 5ರಂದು ನಡೆಯಲಿರುವ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ವಿತರಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಸುಮಾ (9449240501/ 9071065390) ಉಪನ್ಯಾಸಕರು ವಾಣಿಜ್ಯ ಶಾಸ್ತ್ರ ವಿಭಾಗ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Don't waste time invest time: Somasekhar Bhat

  Don't waste time invest time: Somasekhar Bhat   Kundapur: A lecture program on Innovation: “Deciding the Future of Educational Institutions” was held at Bhandarkars College in association with Institution Innovation Council here on 8th November 2022. Dr. Somasekhar, Professor of Electronics and Communication Engineering Department of Manipal Higher Education,  Manipal,w came as a resource person for the program, said that we should be indebted to the institution.  The organization nurtures us by recognizing and encouraging our talent.  He said that one should use the opportunity properly and shape the future.   Dr.  Muhammad Zubai, Professor of   Aeronautical and Automobile Engineering Department of Manipal Higher Education,  Manipal,  spoke and said that let's build the country through creative innovations. The program was presided over by the Principal of Bhandarkars Degree College, Dr. N.P.  Narayana Shetty was in charge. ...

BCK: "Cancer Awareness" program

  BCK : "Cancer Awareness"  BCK : "Cancer Awareness" prograam was organized under the auspices of the Staff association of Bhandarkar's College here on November 9. Dr. Prashantha, a public health consultant of Carcinos Health Care Private Limited, Mumbai, who came as a resource person for the program, spoke about the ways to prevent cancer.  He said that our lifestyle leads to many diseases.  Therefore, we should develop good habits to manage our lifestyle well.  The Principal Dr.N.P.Narayana  Shetty , Bhandarkars Degree College presided over the occasion. Dr. Saroja M. Vice President of Staff Association was  present. Durga Prasad, Treasurer of the Teachers' Association and offered his thanks.  Co-ordinator Sumalatha Nayka conducted the program.
 ಕುಂದಾಪುರ: ನವೆಂಬರ್ 9ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರ ಸಂಘದ ಆಶ್ರಯದಲ್ಲಿ "ಕ್ಯಾನ್ಸರ್ ಕುರಿತು ಜಾಗೃತಿ"ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ  ಮುಂಬೈ ನ ಕಾರ್ಕಿನೋಸ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ನ ಸಾರ್ವಜನಿಕ ಆರೋಗ್ಯ ಸಲಹೆಗಾರಾದ ಡಾ.ಪ್ರಶಾಂತ ಮಾತನಾಡಿ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಇರುವ ಮಾರ್ಗೋಪಾಯಗಳನ್ನು ತಿಳಿಸಿದರು.  ಅವರು ಮಾತನಾಡಿ ನಮ್ಮ ಜೀವನಶೈಲಿ ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಮ್ಮ ಜೀವನಶೈಲಿಯನ್ನು ಉತ್ತಮವಾಗಿ ನಿರ್ವಹಿಸಲು ನಾವು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.  ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಅಧ್ಯಕ್ಷತೆಯನ್ನು ವಹಿಸಿದ್ದರು. ಅಧ್ಯಾಪಕರ ಸಂಘದ ಉಪಾಧ್ಯಕ್ಷೆ ಡಾ.ಸರೋಜ ಎಂ. ಉಪಸ್ಥಿತರಿದ್ದರು. ಅಧ್ಯಾಪಕರ ಸಂಘದ ಖಜಾಂಚಿ ದುರ್ಗಾಪ್ರಸಾದ್ ಮತ್ತು ವಂದಿಸಿದರು. ಸಹಕಾರ್ಯದರ್ಶಿ ಸುಮಲತಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.