ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ

 ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ 

ಕುಂದಾಪುರ: ಡಿಸೆಂಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ  ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಎಜುಕೇಶನ್ ಇದರ ಸಾಂಸ್ಕೃತಿಕ ಸಹಕಾರ ಸಮಿತಿಯ  ಸಹಯೋಗದಲ್ಲಿ ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. 

ರಾಷ್ಟ್ರೀಯ ಕಥಕ್ ನೃತ್ಯ ಕಲಾವಿದ ಪಂಡಿತ್ ರಾಜೇಂದ್ರ ಗಂಗಾನಿ ಅವರು ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಜನಮನ ಸೆಳೆಯಿತು.

ಮೋಹಿತ್ ಗಂಗಾನಿಯವರು ತಬಲಾ, ವಿನೋದ್ ಕುಮಾರ್ ಅವರು ಹಾಡುಗಾರಿಕೆ ಮತ್ತು ಹಾರ್ಮೋನಿಯಂ, ಕಿಶೋರ್ ಕುಮಾರ್ ಮೃದಂಗ ಮತ್ತು ರವಿಶಂಕರ್ ಶರ್ಮಾ ಅವರು ಸಿತಾರ್ ವಾದನದಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ , ಕಲಾ ಸಂಘದ ಸಂಯೋಜಕರಾದ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕಿ  ಸುಮಾ ಸ್ವಾಗತಿಸಿ ವಂದಿಸಿದರು.

Comments

Popular posts from this blog

ರಕ್ತದಾನ ಜೀವದಾನ : ಎಸ್. ಜಯಕರ್ ಶೆಟ್ಟಿ,

ಇನ್ಸ್ಟಿಟ್ಯೂಷನ್ ಇನ್ನೋವೇಶನ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ