Posts

Showing posts from April, 2023
 ಕುಂದಾಪುರ, 12: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಇಲ್ಲಿನ ಐಕ್ಯೂಎಸಿ, ಚುನಾವಣಾ ಸಾಕ್ಷರತ ಕ್ಲಬ್, ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ,ಎನ್. ಸಿ. ಸಿ., ಮತ್ತು ಜಿಲ್ಲಾ ಸ್ವಿಪ್ ಸಮಿತಿಯ ಅವರ ಸಹಯೋಗದಲ್ಲಿ ಮತದಾರರ ಅರಿವು ಕಾರ್ಯಕ್ರಮ ನಡೆಯಿತು.  ಡಾ.ಸದಾನಂದ ಬೈಂದೂರು, ಎಸ್ ವಿಈಈಪಿ ತರಬೇತುದಾರರು, ಶಿಕ್ಷಕರು  ಸರಕಾರಿ ಶಾಲೆ ಕುಂದಾಪುರ  ಮತ್ತು ರಾಘವೇಂದ್ರ ಕಿಣಿ, ಎಲೆಕ್ಷನ್ ಸೆಕ್ಟರ್ ಆಫೀಸರ್, ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್ ಕಟ್ಟೆ ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮತದಾನ ಮತ್ತು ಮತದಾರರ ಕುರಿತು ಅರಿವು ಮೂಡಿಸಿದರು.   ಡಾ. ಎನ್.ಪಿ ನಾರಾಯಣ್ ಶೆಟ್ಟಿ ಪದವಿ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.   ಈ ಸಂದರ್ಭದಲ್ಲಿ  ವೇದಿಕೆಯಲ್ಲಿ  ಶಶಿಕಾಂತ್ ಹಾತ್ವಾರ್ ಉಪನ್ಯಾಸಕರು ಭೌತಶಾಸ್ತ್ರ ವಿಭಾಗ ಮತ್ತು ಅರುಣ್ ಎ.ಎಸ್, ಎನ್ಎಸ್ಎಸ್ ಯೋಜನಾಧಿಕಾರಿ,   ಉಪಸ್ಥಿತರಿದ್ದರು.   ಡಾ.ಶುಭಕರ ಆಚಾರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸ್ವಾಗತಸಿ,ಎನ್ ಎಸ್ ಎಸ್ ಯೋಜನಾಧಿಕಾರಿ ರಾಮಚಂದ್ರ ಆಚಾರ್  ನಿರೂಪಿಸಿ, ಮತ್ತು  ರೆಡ್ ಕ್ರಾಸ್ ಯೋಜನಾಧಿಕಾರಿ ಸತ್ಯನಾರಾಯಣ ವಂದಿಸಿದರು

ಹೆತ್ತವರು ಮತ್ತು ಪೋಷಕರ ಸಮ್ಮಿಲನ

 ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಏಪ್ರಿಲ್ 8ರಂದು ಹೆತ್ತವರು ಮತ್ತು ಪೋಷಕರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ರವಿರಾಜ್ ನಾಯಕ್  ಮಾತನಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇರುವಂತಹ ನೆಲೆಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮನ್ನು ತಾವು ಮೊದಲು ಅರಿಯಬೇಕು. ತನ್ನಲ್ಲಿರುವ ಕೌಶಲಗಳನ್ನು ಗುರುತಿಸಿಕೊಳ್ಳಬೇಕು. ಜೊತೆಗೆ ಉತ್ತಮ ಅಂಕಗಳನ್ನು ಪಡೆಯುವುದು ತುಂಬಾ ಮುಖ್ಯ. ಅಲ್ಲದೆ ಸಾಮಾನ್ಯ ಜ್ಞಾನ ಅಷ್ಟೇ ಅಗತ್ಯ ಅಲ್ಲದೆ ಹೆತ್ತವರ ಜವಾಬ್ದಾರಿಯನ್ನು ನೆನಪಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರಭಾವತಿ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಆದಂ ಗುಲ್ವಾಡಿ, ರಾಜೇಂದ್ರ ಉರಾಳ್ ಪ್ರಾಕ್ತನ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸತ್ಯನಾರಾಯಣ ಸ್ವಾಗತಿಸಿದರು. ಇತಿಹಾಸ ಪ್ರಾಧ್ಯಾಪಕ ಪ್ರೊ. ಗೋಪಾಲ್ ಕೆ ವಂದಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ

Image
ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ   ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಹಯವದನ ಉಪಾಧ್ಯಾಯ ಮಾತನಾಡಿ ಸಂಶೋಧನೆಯ ಕಾರ್ಯ ನಿರಂತರವಾಗಿರಬೇಕು. ಸಂಶೋಧಕನಾದವನು ವೈಜ್ಞಾನಿಕ ನೆಲೆಯಲ್ಲಿ ಆಲೋಚಿಸಬೇಕು. ಅವರವರ ಆಯ್ಕೆಯ ವಿಷಯದಲ್ಲಿ ಆಸಕ್ತಿಯಿಂದ ಸಂಶೋಧನೆ ಮಾಡಬೇಕೆ ಹೊರತು ಕಾಟಾಚಾರಕ್ಕೆ ಮಾಡಬಾರದು. ಹಾಗೆ ಸಂಶೋಧನೆಯ ಮೂಲಕ ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.  ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕರು ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಯಶವಂತಿ ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ

Image
ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ    ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ ರೇಖಾ ಬನ್ನಾಡಿ ಅವರು ಬಸವಣ್ಣ ಮತ್ತು ನಾರಾಯಣಗುರು ಇಬ್ಬರು ಜನಸಾಮಾನ್ಯರ  ಸ್ವಸ್ಥವಾಗಿ  ಬದುಕಬೇಕು ಎಂಬುದರಲ್ಲಿ ನೆಲೆ ಕಂಡುಕೊಂಡವರು. ಅಂದು ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ಮತ್ತು ವರ್ಣಭೇದದಿಂದ ಶೈಕ್ಷಣಿಕ ಮತ್ತು ಸಮಾನ ಜೀವನದಲ್ಲಿ ತಾರತಮ್ಯತೆ ಇತ್ತು. ಕೇವಲ ಮಠ ಮಂದಿರಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ಈ ಕಾಲಘಟ್ಟದಲ್ಲಿ ಬಸವಣ್ಣ ತಾರತಮ್ಯವನ್ನು ಎಂದಿಗೂ ಒಪ್ಪಲಿಲ್ಲ. ತನ್ನ ಸಮಾಜದ ತಾರತಮ್ಯ ನೀತಿಯ ಕುರಿತು ತನ್ನನ್ನೇ ತಾನು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಭಕ್ತಿಯ ಆಂದೋಲನದಲ್ಲಿ ಬಸವಣ್ಣ ತನ್ನನ್ನು ಕಂಡರು.   ನಾರಾಯಣಗುರುಗಳ ತತ್ವ ಆದರ್ಶಗಳು ಸಹ ಸಾಮ್ಯತೆ ಇದೆ. ಇಬ್ಬರೂ ಸಮಾಜದ ಸಮಾನ ಬದುಕಿನಲ್ಲಿ ತಮ್ಮನ್ನು ಕಂಡುಕೊಂಡವರು. ಪ್ರಜಾಸತ್ತಾತ್ಮಕತೆ ಇವರಿಬ್ಬರಲ್ಲೂ ಇತ್ತು. ಇವರಿಬ್ಬರನ್ನು ಇಂದಿನ ಭಕ್ತರು ಬಂಧಿಯಾಗಿಸಿದ್ದಾರೆ ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶ

ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ

Image
  ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಹಯವದನ ಉಪಾಧ್ಯಾಯ ಮಾತನಾಡಿ ಸಂಶೋಧನೆಯ ಕಾರ್ಯ ನಿರಂತರವಾಗಿರಬೇಕು. ಸಂಶೋಧಕನಾದವನು ವೈಜ್ಞಾನಿಕ ನೆಲೆಯಲ್ಲಿ ಆಲೋಚಿಸಬೇಕು. ಅವರವರ ಆಯ್ಕೆಯ ವಿಷಯದಲ್ಲಿ ಆಸಕ್ತಿಯಿಂದ ಸಂಶೋಧನೆ ಮಾಡಬೇಕೆ ಹೊರತು ಕಾಟಾಚಾರಕ್ಕೆ ಮಾಡಬಾರದು. ಹಾಗೆ ಸಂಶೋಧನೆಯ ಮೂಲಕ ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.  ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕರು ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಯಶವಂತಿ ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ

Image
  ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ ರೇಖಾ ಬನ್ನಾಡಿ ಅವರು ಬಸವಣ್ಣ ಮತ್ತು ನಾರಾಯಣಗುರು ಇಬ್ಬರು ಜನಸಾಮಾನ್ಯರ  ಸ್ವಸ್ಥವಾಗಿ  ಬದುಕಬೇಕು ಎಂಬುದರಲ್ಲಿ ನೆಲೆ ಕಂಡುಕೊಂಡವರು. ಅಂದು ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ಮತ್ತು ವರ್ಣಭೇದದಿಂದ ಶೈಕ್ಷಣಿಕ ಮತ್ತು ಸಮಾನ ಜೀವನದಲ್ಲಿ ತಾರತಮ್ಯತೆ ಇತ್ತು. ಕೇವಲ ಮಠ ಮಂದಿರಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ಈ ಕಾಲಘಟ್ಟದಲ್ಲಿ ಬಸವಣ್ಣ ತಾರತಮ್ಯವನ್ನು ಎಂದಿಗೂ ಒಪ್ಪಲಿಲ್ಲ. ತನ್ನ ಸಮಾಜದ ತಾರತಮ್ಯ ನೀತಿಯ ಕುರಿತು ತನ್ನನ್ನೇ ತಾನು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಭಕ್ತಿಯ ಆಂದೋಲನದಲ್ಲಿ ಬಸವಣ್ಣ ತನ್ನನ್ನು ಕಂಡರು.   ನಾರಾಯಣಗುರುಗಳ ತತ್ವ ಆದರ್ಶಗಳು ಸಹ ಸಾಮ್ಯತೆ ಇದೆ. ಇಬ್ಬರೂ ಸಮಾಜದ ಸಮಾನ ಬದುಕಿನಲ್ಲಿ ತಮ್ಮನ್ನು ಕಂಡುಕೊಂಡವರು. ಪ್ರಜಾಸತ್ತಾತ್ಮಕತೆ ಇವರಿಬ್ಬರಲ್ಲೂ ಇತ್ತು. ಇವರಿಬ್ಬರನ್ನು ಇಂದಿನ ಭಕ್ತರು ಬಂಧಿಯಾಗಿಸಿದ್ದಾರೆ ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶು