Posts

Showing posts from January, 2023

Workshop on Folk culture

Image
 Workshop on Folk culture Workshop on Folk culture was organised in Bhandarkars'  college in association witj District Janapada  Parishath udupi here on 25th January 2023.  Jayaprakash Hegde, a Chairman of Backward Classes Commission, Karnataka  was inaugurated the programme.  U.S Shenoy, Editor, Kundaprabha Weekly Magazine, kundapura gave a special talk on "Role of Youth in the social  develeoment"  Lion Dr.M.K.Bhat was inaugurated the Variety folk programm.  K.S.Ashok Acharya, Vice President of  District Janapada  Parishath udupi welcomed the gathering .  Raviraj Nayak, Secretory of  District Janapada  Parishath udupi was compered the program. Variety programmes of flok culture showed by Kalamayam Team Udupi. 

ಉಚಿತ ಚರ್ಮದ ಆರೈಕೆ ಚಿಕಿತ್ಸೆ ಮತ್ತು ಔಷಧಿ ವಿತರಣಾ ಶಿಬಿರ

Image
ಉಚಿತ ಚರ್ಮದ ಆರೈಕೆ ಚಿಕಿತ್ಸೆ ಮತ್ತು ಔಷಧಿ ವಿತರಣಾ ಶಿಬಿರ  ಕುಂದಾಪುರ : ಜನೆವರಿ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ. ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಚರ್ಮ ಚಿಕಿತ್ಸಾ ವಿಭಾಗ ಮತ್ತು ಹೆಗ್ಡೆ ಆಂಡ್ ಹೆಗ್ಡೆ ಫಾರ್ಮಾಸ್ಯುಟಿಕಲ್ ಲಿಮಿಟೆಡ್, ಮುಂಬೈ ಇವರ  ಸಹಯೋಗದಲ್ಲಿ "ಉಚಿತ ಚರ್ಮದ ಆರೈಕೆ ಚಿಕಿತ್ಸೆ ಮತ್ತು ಔಷಧಿ ವಿತರಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಚರ್ಮ ಚಿಕಿತ್ಸಾ ವಿಭಾಗದ ವೈದ್ಯರಾದ ಡಾ. ಸತೀಶ್ ಪೈ ಆಗಮಿಸಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ  ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ,  ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ ಸತ್ಯನಾರಾಯಣ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸುರೇಂದ್ರ ಹೆಚ್.ಹೆಚ್. ಉಪಸ್ಥಿತರಿದ್ದರು.  ನಂತರ ಹೆಚ್ಚಿನ ವಿದ್ಯಾರ್ಥಿಗಳು ಈ ಉಚಿತ ಚರ್ಮ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಂಡರು.

ರಕ್ತ ದಾನ ಶಿಬಿರ

Image
 ರಕ್ತ ದಾನ ಶಿಬಿರ ಕುಂದಾಪುರ: ಜನವರಿ 18ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕ, ಕಾಲೇಜಿನ ಯುಥ್ ರೆಡ್ ಕ್ರಾಸ್, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ರೇಂಜರ್ಸ್ ಮತ್ತು ರೋವರ್ಸ್ ಇವರ ಸಂಯುಕ್ತಾಶ್ರಯದಲ್ಲಿ ರಕ್ತ ದಾನ ಶಿಬಿರ ನಡೆಯಿತು.  ಕಾರ್ಯಕ್ರಮವನ್ನು  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷರಾದ ಜಯಕರ ಶೆಟ್ಟಿ ಉದ್ಘಾಟಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಕಾರ್ಯದರ್ಶಿ  ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಂ ಶೆಟ್ಟಿ, ಸದಸ್ಯರಾದ ಡಾ. ಸೋನಿ ಡಿಕೋಸ್ತಾ,  ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ ಜಿ.ಎಂ.ಗೊಂಡ, ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಸತ್ಯನಾರಾಯಣ  ರೇಂಜರ್ಸ್ ಮತ್ತು ರೋವರ್ಸ್ ಇದರ ರಿತಿನ್ ಮತ್ತು ಅಕ್ಷತಾ ಉಪಸ್ಥಿತರಿದ್ದರು.  ಸುಮಾರು 201ಯುನಿಟ್ ರಕ್ತ ಸಂಗ್ರಹಿಸಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ರಕ್ತ ನಿಧಿ ಕೇಂದ್ರಕ್ಕೆ ನೀಡಲಾಯಿತು.

NATIONAL YOUTH DAY 2023

Image
 NATIONAL YOUTH  DAY 2023 NationalYouth Day was celebrated in the college on 12th January 2023.