ಸಂಸ್ಥಾಪಕರ ದಿನಾಚರಣೆ
ಸಂಸ್ಥಾಪಕರ ದಿನಾಚರಣೆ
ಕಾಲೇಜಿನಲ್ಲಿ ಡಿಸೆಂಬರ್ 5ರಂದು ಸಂಸ್ಥಾಪಕರ ದಿನಾಚರಣೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟಾಟಾ ಪವರ್ ಇಂಡಿಯಾದ ಟ್ರಾನ್ಸಮೀಶನ್ ಮತ್ತು ಡಿಸ್ಟ್ರಿಬ್ಯೂಶನ್ ಇದರ ಮಾಜಿ ಅಧ್ಯಕ್ಷ ಮಿನಿಷ್ ಧವೆ ಮಾತನಾಡಿ ನೆಮ್ಮದಿಯ ಮತ್ತು ಯಶಸ್ವಿ ಬದುಕು ಸಾಗಬೇಕಾದರೆ ಮುಖ್ಯವಾಗಿ ಸಂತೋಷ, ಕಠಿಣ ಪರಿಶ್ರಮ, ಮೊದಲು ಆದ್ಯತೆ ಮತ್ತು ವಿವೇಕ ಮತ್ತು ಜ್ಞಾನ ಉಳ್ಳವರು ಮಾತುಗಳನ್ನು ಕೇಳಬೇಕು. ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಕಾಲೇಜು ಸ್ಥಾಪಕರ ಉದಾತ್ತ ಧ್ಯೇಯಗಳನ್ನು ಅವರು ಮಕ್ಕಳಲ್ಲಿಯೂ ಇದೆ. ಅದೆ ಸಂಸ್ಕಾರ ಅವರ ಕುಟುಂಬದವರಲ್ಲಿ ಇದೆ. ಎಷ್ಟೋ ಜನರಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಪರಮಪೂಜ್ಯ ಶಾಂತಾರಾಮ್ ಭಂಡಾರ್ಕರ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು, ಸದಾನಂದ ಛಾತ್ರ, ದೇವಿದಾಸ ಕಾಮತ್, ರಾಜೇಂದ್ರ ತೋಳಾರ್ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು. ಇಂಗ್ಲಿಷ್ ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು.
Comments
Post a Comment