ಅಂತರ್ ಕಾಲೇಜು ಸಂಗೀತ ಸ್ಪರ್ಧೆ

 

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಡಿಸೆಂಬರ್ 2ರಂದು ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳು ನಡೆಯಲಿವೆ.

ಶಾಸ್ತ್ರೀಯ ಹಾಡುಗಾರಿಕೆ, ಶಾಸ್ತ್ರೀಯ ವಾದ್ಯ ಸಂಗೀತ, ದಾಸ ಕೀರ್ತನೆ ಲಘು ಶಾಸ್ತ್ರೀಯ ಶೈಲಿ), ಸಮೂಹ ಗಾಯನ (ದೇಶಭಕ್ತಿ ಗೀತೆ), ಕನ್ನಡ ಭಾವಗೀತೆ, ಕನ್ನಡ ಜಾನಪದ ಗೀತೆ ಮತ್ತು ಚಿತ್ರಗೀತೆ (ಕನ್ನಡ ಅಥವಾ ಹಿಂದಿ) ( ಕರೋಕೆಗೆ ಅವಕಾಶವಿಲ್ಲ) ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಿಸೆಂಬರ್ 5ರಂದು ನಡೆಯಲಿರುವ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ವಿತರಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಸುಮಾ (9449240501/ 9071065390) ಉಪನ್ಯಾಸಕರು ವಾಣಿಜ್ಯ ಶಾಸ್ತ್ರ ವಿಭಾಗ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Comments

Popular posts from this blog

ರಕ್ತದಾನ ಜೀವದಾನ : ಎಸ್. ಜಯಕರ್ ಶೆಟ್ಟಿ,

ಇನ್ಸ್ಟಿಟ್ಯೂಷನ್ ಇನ್ನೋವೇಶನ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ