Posts

ಭಂಡಾರ್ಕಾರ್ಸ್: 47ನೇ ಯಕ್ಷಗಾನ ತಾಳಮದ್ದಳೆ ಮತ್ತು ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ

Image
  47ನೇ ಯಕ್ಷಗಾನ ತಾಳಮದ್ದಳೆ ಮತ್ತು ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ  ಕುಂದಾಪುರ: ನವೆಂಬರ್ 1 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಆವರ್ತ ಯಕ್ಷವೇದಿಕೆಯ ಆಶ್ರಯದಲ್ಲಿ  47ನೇ ಯಕ್ಷಗಾನ ತಾಳಮದ್ದಳೆ ಮತ್ತು ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಸಮಾರಂಭ ನಡೆಯಿತು. ತೆಂಕುತಿಟ್ಟಿನ ಯುವ ಯಕ್ಷಗಾನ ಕಲಾವಿದೆ ಮಾನ್ಯಶ್ರೀ ಕುಲ್ಕುಂದ ಮತ್ತು  ಬಡಗುತಿಟ್ಟಿನ  ಯುವ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಅವರಿಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ ನೀಡಿ ಗೌರವಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಉಡುಪಿ ಯಕ್ಷಗಾನ ಕಲಾರಂಗದ ಪ್ರದಾನ ಕಾರ್ಯದರ್ಶಿ ಮುರುಳಿ ಕಡೇಕಾರ್ ಮತ್ತು ಸಾಲಿಗ್ರಾಮ ಮೇಳದ ಪ್ರಮುಖ ಪಿ.ಕಿಶನ್ ಹೆಗ್ಡೆ ಅಭಿನಂದನಾ ಭಾಷಣವನ್ನು ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯಜುಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕಾವ್ಯ ಹಿಂದೆ ಪರಿಚಯಿಸಿದರು.
Image
  ©¹PÉ:  PÉÆÃn PÀAoÀ UÁAiÀÄ£À ©¹PÉ: ¨sÀAqÁPÁðgïì PÁ¯ÉÃf£À°è 67£Éà gÁeÉÆåÃvÀìªÀzÀ CAUÀªÁV PÉÆÃn PÀAoÀ UÁAiÀÄ£À PÁAiÀÄðPÀæªÀÄ CPÉÆÖçgï 28gÀAzÀÄ £ÀqɬÄvÀÄ.

ಭಂಡಾರ್ಕಾರ್ಸ್ :ಏನ್ ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ:

Image
  ಭಂಡಾರ್ಕಾರ್ಸ್ :ಏನ್ ಎಸ್ಎಸ್ ವಾರ್ಷಿಕ ಚಟುವಟಿಕೆಗಳ  ಉದ್ಘಾಟನೆ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ  22-23ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನವೆಂಬರ್ 19ರಂದು ನೆರವೇರಿತು.  ಡಾ.ರೇಖಾ ವಿ ಬನ್ನಾಡಿ, ನಿವ್ರತ್ತ ಪ್ರಾಧ್ಯಾಪಕರು, ಕನ್ನಡ ವಿಭಾಗ, ಭಂಡಾರ್ಕರ್ಸ್ ಕಾಲೇಜು ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಏನ್ ಎಸ್ ಎಸ್ ನ    ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ, ಶ್ರಮದಾನ, ಸಮಾಜಸೇವೆಯ ಮಹತ್ವದೊಂದಿಗೆ ಜೀವನ ಕೌಶಲ್ಯವನ್ನು ಈ ಎನ್ನ ಎಸ್ ಎಸ್ ಕಲಿಸಿ ಕೊಡುತ್ತದೆ ಎಂದು ತಿಳಿಸಿದರು. ಯೋಜನಾಧಿಕಾರಿಗಳಾದ ರಾಮಚಂದ್ರ ಆಚಾರ್, ಅರುಣ್ ಎ ಎಸ್, ಹಾಗೂ ಸಹ ಯೋಜಾನಾಧಿಕಾರಿ ಶ್ರೀಮತಿ ಸ್ವಪ್ನ  ಹಾಗೂ ಇತರ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಕುಮಾರಿ ಜಾಸನಿನ್ ಪ್ರಥಮ ಬಿಕಾಂ ಅತಿಥಿಗಳನ್ನು ಸ್ವಾಗತಿಸಿದರು, ಕುಮಾರಿ ರಕ್ಷಿತಾ, ದ್ವಿತೀಯ ಬಿಎಸ್ಸಿ ವಂದಿಸಿದರು ಹಾಗೂ ಕುಮಾರಿ ಪಂಚಮಿ, ತೃತೀಯ ಬಿಎಸ್ಸಿ ಕಾರ್ಯಕ್ರಮ ನಿರ್ವಹಿಸಿದರು.

An awareness program on "Save the Soil"

Image
An awareness program on "Save the Soil"   Sahil Jha speaking Save Soil Campaign Kundapur: An awareness program on "Save the Soil" was held on September 20 at Bhandarkar's College here in collaboration with the Youth Red Cross Unit  of the college. Sahil Jha from Kolkata who arrived as the chief guest of the program spoke, soil   It is an integral part of our environment and life.  Soil needs to be saved for sustainable agriculture and environment.  Traveling thousands of kilometers across the country by bicycle to spread awareness about soil conservation.  "Talk about the soil, sing about the soil, breathe the soil, live from the soil" let's all come together and tell the importance of the soil and protect the soil.  You are also called to be involved in soil protection through various social networks and media.  The program was presided over by the principal of the college.  N. P.  Narayana Shetty was in charge. On this occasion Ja...

ದೆಹಲಿಯಲ್ಲಿ ನಡೆಯಲಿರುವ"ಥಲ್ ಸೈನಿಕ್ ಶಿಬಿರ" ದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ ಗಳಾದ ಎಸ್.ಯು.ಒ.ರಂಜಿತ್ ಹಾಗೂ ಜೆ.ಯು.ಒ ಆನ್ಸ್ಟನ್ ಇಮ್ಯಾನ್ಯುಯಲ್ ರೆಬೆಲ್ಲೊ

Image
  ದೆಹಲಿಯಲ್ಲಿ ನಡೆಯಲಿರುವ"ಥಲ್ ಸೈನಿಕ್ ಶಿಬಿರ" ದಲ್ಲಿ  ಭಂಡಾರ್ಕಾರ್ಸ್ ಕಾಲೇಜಿನ ಎನ್.ಸಿ.ಸಿ ಆರ್ಮಿ ಕೆಡೆಟ್ ಗಳಾದ ಎಸ್.ಯು.ಒ.ರಂಜಿತ್ ಹಾಗೂ ಜೆ.ಯು.ಒ ಆನ್ಸ್ಟನ್ ಇಮ್ಯಾನ್ಯುಯಲ್ ರೆಬೆಲ್ಲೊ  J.A.O Anston Emmanuel Rebello S.U.O Ranjith ಕುಂದಾಪುರ: ಇಲ್ಲಿನ   ಭಂಡಾರ್ಕಾರ್ಸ್ ಕಾಲೇಜಿನ   ಎನ್.ಸಿ.ಸಿ ಆರ್ಮಿ ಕೆಡೆಟ್ ಗಳಾದ ಎಸ್.ಯು.ಒ.ರಂಜಿತ್ ಹಾಗೂ ಜೆ.ಯು.ಒ ಆನ್ಸ್ಟನ್ ಇಮ್ಯಾನ್ಯುಯಲ್ ರೆಬೆಲ್ಲೊ ಇವರುಗಳು ಇದೆ 14ನೇ ಸೆಪ್ಟೆಂಬರ್ 2022ರಿಂದ 25ನೇ ಸೆಪ್ಟೆಂಬರ್ 2022ರವರೆಗೆ ದೆಹಲಿಯಲ್ಲಿ ನಡೆಯಲಿರುವ "ಥಲ್ ಸೈನಿಕ್ ಶಿಬಿರ"ದಲ್ಲಿ ಭಾಗವಹಿಸುತ್ತಿದ್ದಾರೆ.  ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರಿಗೆ ಕಾಲೇಜಿನ ಎನ್ ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಅಂಜನ್ ಕುಮಾರ್ ಎಂ.ಎಲ್ ತರಬೇತಿ ನೀಡಿದ್ದರು.

ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ

Image
  ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ ಸೆಪ್ಟೆಂಬರ್ 1ರಂದು ಕಾಲೇಜಿನಲ್ಲಿ  ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳು  ಕಾಲೇಜಿನ ಇತಿಹಾಸ, ವಿವಿಧ ವಿಭಾಗಗಳು, ಸೌಲಭ್ಯಗಳು, ವೃತ್ತಿ ಮಾರ್ಗದರ್ಶನ, ಗ್ರಂಥಾಲಯ,ಪಾಠೇತರ ಚಟುವಟಿಕೆಗಳು, ಮಾಹಿತಿ ತಂತ್ರಜ್ಞಾನ, ಮಹಿಳಾ ವೇದಿಕೆ, ವಿದ್ಯಾರ್ಥಿ ಕ್ಷೇಮಪಾಲನಾ ಕುರಿತು ವಿಶೇಷ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಪಿ.ನಾರಾಯಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲಲಿತಾದೇವಿ, ಮಹಿಳಾ ವೇದಿಕೆ ಸಂಯೋಜಕರಾದ ಡಾ.ಯಶವಂತಿ ಕೆ. ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ಗೋಪಾಲ್, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಕಿರಣ್ ಹಂದೆ, ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗಬಾರದು: ನರೇಂದ್ರ ಕುಮಾರ್ ಕೋಟ

Image
  ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗಬಾರದು: ನರೇಂದ್ರ ಕುಮಾರ್ ಕೋಟ ಕುಂದಾಪುರ: ಮೇಧಾವಿಗಳು ತಿಳಿದವರು ಶಿಕ್ಷಣದ ಕುರಿತು ಸಾಕಷ್ಟು ವ್ಯಾಖ್ಯಾನ ಪ್ರಕಾರ ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗಬಾರದು. ಅದರಾಚೆಗೂ ನಮ್ಮ ಬದುಕಿಗೆ ಪೂರಕವಾದ ಶಿಕ್ಷಣವು ದೊರೆತಾಗ ಆ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಣವು ಬೇರೆ ಬೇರೆ ಆಯಾಮವನ್ನು ಪಡೆದುಕೊಂಡಿದೆ. ಹೊಸ ಶಿಕ್ಷಣ ನೀತಿಯೂ ಮಕ್ಕಳನ್ನು ತರಗತಿ ಮಾತ್ರವಲ್ಲದೇ ಅದರಾಚೆಗೆ ತೆರಡಿದಲು ಸಾಧ್ಯವಾಗಿದೆ.  ವಿದ್ಯಾರ್ಥಿಗಳೆಲ್ಲರೂ ಶೈಕ್ಷಣಿಕ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ಇಂದು ಮಾತ್ರ ನೆನೆಯುವುದು ಅಲ್ಲ, ಅವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ವಿವೇಕ ಪ್ರೌಢಶಾಲಾ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದರು.      ಅವರು  ಸೆಪ್ಟೆಂಬರ್ 5ರಂದು ಇಲ್ಲಿನ ಭಂಡಾರ್ ಕಾರ್ಸ್ ಕಲಾ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ, ಮಾತನಾಡಿದರು. ಸಾಮಾನ್ಯವಾಗಿ ಎಲ್ಲರ ಆತಂಕ, ಭಯ ಹಾಗೂ ಧಾವಂತಗಳಲ್ಲಿಯೇ ಬದುಕುತ್ತಿದ್ದೇವೆ. ಇದನ್ನ ಮನೋ ಮಾಲಿನ್ಯ ಎನ್ನಬಹುದು. ಮನ ಹಾಗೂ ಮನಸ್ಸು ಕತ್ತಲೆ ಮಾಡಿಕೊಂಡು ಬೇರೆ ಕಡೆಯಲ್ಲಿ ಬೆಳಕು ಹುಡುಕುವ ಪ್ರಯತ್ನ ಮಾಡುತ್ತೇವೆ. ಆದರೆ ಯಾವತ್ತೂ ಮನಸ್ಸಿನಲ...

ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ" ಕುರಿತು ಜಾಗೃತಿ ಕಾರ್ಯಕ್ರಮ

Image
  ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ" ಕುರಿತು ಜಾಗೃತಿ ಕಾರ್ಯಕ್ರಮ ಕುಂದಾಪುರ: ಆಗಸ್ಟ್ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ  ಸೇವಾ ಯೋಜನೆ ಘಟಕ, ಯುಥ್ ರೆಡ್ ಕ್ರಾಸ್ ಘಟಕ, ಎನ್.ಸಿ.ಸಿ ಘಟಕ, ಭಾರತ ಸರ್ಕಾರದ ಭೂವಿಜ್ಞಾನ ಸಚಿವಾಲಯ, ದೆಹಲಿ, ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರ  ಮತ್ತು ಪುರಸಭೆ ಕುಂದಾಪುರ ಇವರ ಸಹಯೋಗದಲ್ಲಿ " ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ" ಕುರಿತು ಜಾಗೃತಿ ಕಾರ್ಯಕ್ರಮ  ಕಾಲೇಜಿನ ರಾಧಾಬಾಯಿ ಹಾಲ್ ನಲ್ಲಿ  ನಡೆಯಿತು.  ಮಣಿಪಾಲದ ಎಂ.ಐ.ಟಿಯ ಸಹಪ್ರಾಧ್ಯಾಪಕ  ಡಾ. ಅನಿಶ್ ಕುಮಾರ್ ವಾರಿಯರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಅವರು ಸಮುದ್ರದ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳು ಮತ್ತು ಸಮುದ್ರದ ಮಾಲಿನ್ಯ ತಡೆಯಲು ಇರುವಂತಹ ಪರಿಹಾರಾತ್ಮಕ ಸಲಹೆಗಳ ಕುರಿತು ಮಾಹಿತಿ ನೀಡಿದರು.  ಇನ್ನೋರ್ವ ಅತಿಥಿ  ಕುಂದಾಪುರ ಪುರಸಭೆಯ ಪರಿಸರ ವಿಜ್ಞಾನಿ ( Engineer) ಗುರುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್  ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ...

ಸೀನಿಯರ್ಸ್ ಡೇ

  ಕುಂದಾಪುರ: ಆಗಸ್ಟ್ 27ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ "ಸೀನಿಯರ್ಸ್ ಡೇ" ಕಾರ್ಯಕ್ರಮ ನಡೆಯಿತು ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.  ಈ ಸಂದರ್ಭದಲ್ಲಿ ಇತ್ತೀಚೆಗೆ ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಯಲ್ಲಿ ಕಂಚಿನ ಪದಕ ಪಡೆದ ವಿದ್ಯಾರ್ಥಿ ಅಜಯ್ ದೇವಾಡಿಗ ಅವರನ್ನು . ಅವರನ್ನು ಕುಂದಾಪುರ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಲಾಯಿತು. ಅವರೊಂದಿಗೆ ಭಾಗವಹಿಸಿದ ಪವನ್ ಪೂಜಾರಿ, ಚೇತನ್, ಭರತ್ ತರಬೇತುದಾರ ಕೀರ್ತಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಛಾತ್ರ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲಲಿತಾದೇವಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಮಹಿಳಾ ವೇದಿಕೆ ಸಂಯೋಜಕರಾದ ಡಾ.ಯಶವಂತಿ ಕೆ., ವಾಣಿಜ್ಯ ವಿಭಾಗದ ಮುಖ್ಯಸ್ಥ ಅರುಣ್ ಎ.ಎಸ್, ಕಂಪ್ಯೂಟರ್ ಸೈನ್ಸ್ ವಿಭಾಗ ಉಪನ್ಯಾಸಕ ಕೃಷ್ಣ,  ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಅರ್ಚನಾ ಅರವಿಂದ್ ಉಪಸ್ಥಿತರಿದ್ದರು.  ನಂತರ ವಿದ್ಯಾರ್ಥಿಗಳಿಂದ ಚೆಂಡೆ ವ...

ಪ್ರತಿಭಾ ಪ್ರದರ್ಶನ

Image
  ಕುಂದಾಪುರ: ಆಗಸ್ಟ್ 15ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಪ್ರಯುಕ್ತ ನಡೆದ - ಅಂತರ್ ತರಗತಿ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ದೇವದಾಸ್ ಕಾಮತ್ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬರಹಗಾರ ನರೇಂದ್ರ ಗಂಗೊಳ್ಳಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಸ್ವಾಗತಿಸಿದರು. ಉಪನ್ಯಾಸಕರಾದ ದುರ್ಗಾಪ್ರಸಾದ್ ವಂದಿಸಿ ಸುಮಾ ಕಾರ್ಯಕ್ರಮ ನಿರೂಪಿಸಿದರು.

Donattion for our students who is going to take part in the Thailand Open Karate Championship 2022.

Image
Shanmukharaj of Ventana Foundation Udupi donated 50,000/ each for 4 of our students who is going to take part in the Thailand Open Karate Championship to be held from 19th 23rd August 2022.

Sports News

Image
 

ವಿಶ್ವ ವಿದ್ಯಾಲಯ ಮಟ್ಟದ ದೇಶ ಭಕ್ತಿಗೀತೆ ಸ್ಪರ್ಧೆ ಮತ್ತು ಸ್ವಾತಂತ್ರ್ಯದ ಓಟ ಸ್ಪರ್ಧೆ

Image
 

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ "ಯುವಜನತೆಯಲ್ಲಿ ಮಾನಸಿಕ ಸ್ವಾಸ್ಥ್ಯ" ಎಂಬ ವಿಷಯದ ಕುರಿತು ಉಪನ್ಯಾಸ

Image
  ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಆಶ್ರಯದಲ್ಲಿ  ಆಯೋಜಿಸಿದ್ದ "ಯುವಜನತೆಯಲ್ಲಿ ಮಾನಸಿಕ ಸ್ವಾಸ್ಥ್ಯ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಡುಪಿಯ ಡಾ.ಎ.ವಿ.ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಇಂದಿನ ಯುವಜನತೆಯು ಈಗಿನ  ಜೀವನಶೈಲಿಯಿಂದಾಗಿ ಬೇಗ ಒತ್ತಡಗಳಿಗೆ ಒಳಗಾಗುತ್ತಾರೆ. ಯುವಜನತೆ ಒತ್ತಡ ನಿರ್ವಹಣೆಯ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ನಿಶಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಕಾವ್ಯ ಹೆಚ್. ಸ್ವಾಗತಿಸಿ, ಅಂಜನಾದೇವಿ ಕಾರ್ಯಕ್ರಮ ನಿರ್ವಹಿಸಿ, ನೀಲಾ ಪರಿಚಯಿಸಿ, ಶೃತಿ ವಂದಿಸಿದರು.

ಪ್ಲಾಸ್ಟಿಕ್ ಮತ್ತು ತ್ಯಾಜ್ಯ ನಿರ್ವಹಣೆ ಮಾಹಿತಿ ಕಾರ್ಯಾಗಾರ

Image
  ಕುಂದಾಪುರ : "ಅತಿಯಾದ ಬೆಳವಣಿಗೆ ನಮ್ಮ ಹಿರಿಯರ ಅಥವಾ ಪೂರ್ವಿಕರು ಬೆಳೆಸಿದ ಪರಿಸರವನ್ನ ನಾವು ಹಾಳು ಮಾಡುತ್ತಿದ್ದೇವೆ. ಈ ಪರಿಸರವನ್ನು ಹಾಳು ಮಾಡಲು ನಮಗೆ ಯಾವುದೇ ಹಕ್ಕಿಲ್ಲಾ " ಎಂದು ಗುರುಪ್ರಸಾದ್ ಶೆಟ್ಟಿ ಪರಿಸರ ಅಭಿಯುತರರು ಪುರಸಭೆ ಕುಂದಾಪುರ ಇವರು ಹೇಳಿದರು. ಅವರು ಇತ್ತೀಚಿಗೆ ಇಲ್ಲಿನ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪುರಸಭೆ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ನಿರ್ವಹಣೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.          ಮಾನವನು ತನ್ನ ದೈನಂದಿನ ಬದುಕಿನಲ್ಲಿ ತಾನು ಬಳಸಿ ಎಸೆಯುವ ವಸ್ತುಗಳನ್ನ ಕ್ರಮಬದ್ಧವಾಗಿ ಸಂಗ್ರಹಣೆ ಮಾಡಿ ಸಂಸ್ಕರಣೆ,ಮರುಬಳಕೆ ಹಾಗೂ ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ವಿವರಿಸಿದ್ದರು.          ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎನ್. ಪಿ. ನಾರಾಯಣ್ ಶೆಟ್ಟಿ ಪ್ರಾಂಶುಪಾಲರು, ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ವಹಿಸಿದರು.          ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗೋಪಾಲ್ ಕೃಷ್ಣ ಶೆಟ್ಟಿ ಮುಖ್ಯ ಅಧಿಕಾರಿ ಪುರಸಭೆ ಕುಂದಾಪುರ ಮತ್ತು ರಾಮಚಂದ್ರ ಆಚಾರಿ ಎನ್.ಎಸ್.ಎಸ್ ಯೋಜನಾಧಿಕಾರಿ ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ಉಪಸ್ಥಿತರಿದ್ದರು          200ಕ್ಕ...

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಟೆಬಲ್ ಟೆನಿಸ್ ಟೂರ್ನಾಮೆಂಟ್.

Image
  ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಟೆಬಲ್  ಟೆನಿಸ್ ಟೂರ್ನಾಮೆಂಟ್ ನಡೆಯಿತು.  ಅಂತಿಮ ಪಂದ್ಯದಲ್ಲಿ ಹುಡುಗರು ವಿಭಾಗದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೊದಲ ಸ್ಥಾನ ಪಡೆದು ಚಾಂಪಿಯನ್ ತಂಡವಾಯಿತು. ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ ಕಾಲೇಜು ರನ್ನರ್ ಅಫ್ ಆಗಿ ದ್ವಿತೀಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು ಪುತ್ತೂರಿನ ವಿವೇಕಾನಂದ ಕಾಲೇಜು ಪಡೆಯಿತು. ಹುಡುಗಿಯರ ವಿಭಾಗದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಶಿಪ್ ಪಡೆಯಿತು. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ರನ್ನರ್ ಅಫ್ ಆಗಿ ದ್ವಿತೀಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು ಎಸ್.ಡಿ.ಎಂ ಕಾಲೇಜು ಉಜಿರೆ ಪಡೆಯಿತು. ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ  ನಿತೀಶ್ ಸುವರ್ಣ ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜು ತಂಡದ ಭೂಮಿಕಾ ಪೂಜಾರಿ   ಟೂರ್ನಾಮೆಂಟ್ ನ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು. ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ದೋಮ ಚಂದ್ರಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಶಾಂತಾರಾಮ್ ಪ್ರಭು ವಹಿಸಿದ್ದರು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಟಿ.ಪ್ರಕಾಶ್ ಸೋನ್ಸ್, ಮಂ...

Industrial visit by the students of department of Chemistry.

Image
 

Mangalore University Inter-collegiate Table Tennis Tournament

Image
 Prof. Doma ChandraShekar ex. Principal of Bhandarkars' college Kundapura was inaugurating Mangalore University Inter-collegiate Table Tennis tournament held at our college on 19-20 of July.     

ಕನ್ನಡ ವಿಭಾಗದ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ "ಮೌಲ್ಯಾಧಾರಿತ ಶಿಕ್ಷಣ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

Image
  ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ "ಮೌಲ್ಯಾಧಾರಿತ ಶಿಕ್ಷಣ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಧ್ಯಾಪಕ ಚೇತನ್ ಕುಮಾರ್ ಅವರು  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವಿದ್ಯಾರ್ಥಿಗಳು ಕಾಲದ ಬದಲಾವಣೆಗಳ ಜೊತೆಗೆ ಹೆಜ್ಜೆ ಹಾಕುವಾಗ ಸಮಯಪ್ರಜ್ಞೆ  ಅತಿಮುಖ್ಯ. ಬದುಕಿನಲ್ಲಿ ಯಶಸ್ಸು ಎನ್ನುವುದು ಕಂಡಕಂಡಲ್ಲಿ ಬೆಳೆಯುವುದಿಲ್ಲ. ಯಶಸ್ಸು ಪವಿತ್ರ ಹೃದಯದ ಮಂದಾರ ಪುಷ್ಪ ವಾಗಿದೆ.  ಈ ಯಶಸ್ಸನ್ನು ಪಡೆಯುವಾಗ ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ. ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಪ್ರಯತ್ನ ಪಡಬೇಕು. ಹಾಗೇ ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಏಕೆಂದರೆ ಎಷ್ಟೋ ವಿದ್ಯಾರ್ಥಿಗಳು ತನ್ನ ಶೈಕ್ಷಣಿಕ ಹಂತದಲ್ಲಿ ಶಿಕ್ಷಕರು ಹಾಕಿಕೊಟ್ಟ ಉತ್ತಮ ಮಾರ್ಗದಲ್ಲಿಯೇ ನಡೆದು ಯಶಸ್ಸನ್ನು ಪಡೆಯುತ್ತಾರೆ ಎಂದು ಅಭಿಪ್ರಾಯಪಟ್ಟರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಲಲಿತಾದೇವಿ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಮೈತ್ರಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸೌಮ್ಯ ಕಾರ್ಯಕ್ರಮ ನಿರ್ವಹಿಸಿ, ಚಂದ್ರಿಕಾ ಪರಿಚಯಿಸಿ ಪ್ರಿಯಾಂಕಾ ವಂದಿಸಿದರು.

ಸ್ವಯಂ ಪ್ರತಿಫಲನ ಕಾರ್ಯಗಾರ

Image
 ಸ್ವಯಂ ಪ್ರತಿಫಲನ  ಕಾರ್ಯಗಾರ :   ನಮ್ಮೊಳಗಿನ ಶಕ್ತಿಯನ್ನು ಅರಿಯುವ ತನಕ ನಿಜಕ್ಕೂ ಸಾಧಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾವೇನೆಂದು ನಮ್ಮ ಶಕ್ತಿ ಏನೆಂದು ಅರಿತರೆ ನಮ್ಮ ಗುರಿಯನ್ನು ತಲುಪಬಹುದು ಎಂದು ಮಂಗಳೂರು ಇಲ್ಲಿನ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಸಚಿತ ನಂದಗೋಪಾಲ್ ಹೇಳಿದರು ಅವರು ಜುಲೈ,15 ರಂದು ಭಂಡರ್ಕಾರ್ಸ್ ಕಾಲೇಜಿನಲ್ಲಿ  ಐಚ್ಛಿಕ ಭಾಷೆ ಇಂಗ್ಲಿಷ್ ಪತ್ರಿಕೋದ್ಯಮ ಮನಶಾಸ್ತ್ರ ವಿಭಾಗಗಳು ಸೇರಿ ಆಯೋಜಿಸಿದ್ದ "ಸ್ವಯಂ ಪ್ರತಿಫಲನ"  ಎಂಬ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು . ಜೀವನದಲ್ಲಿ ಅನೇಕ ಬಾರಿ ಸೋಲು ಗೆಲುವು ಎಲ್ಲವನ್ನು ಎದುರಿಸುತ್ತೇವೆ ಆದರೆ ಹೇಗೆ ಎದುರಿಸಬೇಕೆಂಬುದನ್ನು ಮೊದಲು ಅರಿತಿರಬೇಕು ಇಲ್ಲವಾದಲ್ಲಿ ಬದುಕನ್ನು ಗೆಲುವಿನ ಹಂತಕ್ಕೆ ಸಾಗಿಸುವುದು ಕಷ್ಟವಾಗುತ್ತದೆ ಹಾಗಾಗಿ ಸೋಲನ್ನು ಎದೆಗುಂದದೆ ಸ್ವೀಕರಿಸಬೇಕು ಎಂದರು. ಕಾಲೇಜಿನ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿದ್ದ ಅವರು ಅವರದೇ ಜೀವನದ ಘಟನೆಯನ್ನು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿದ್ಯಾರ್ಥಿಗಳು ಸದಾ ಲವಲವಿಕೆಯಿಂದ ಬದುಕಿನ ಪ್ರತಿ ಕ್ಷಣವನ್ನು ಅನುಭವಿಸಬೇಕು ಆಗ ಮಾತ್ರ ಜೀವನಕ್ಕೆ ಅರ್ಥ ಲಭಿಸುತ್ತದೆ ಎಂದರು. ನೃತ್ಯ ಚಿಕಿತ್ಸಕ  ಮತ್ತು ಚಲನವಲನ  ವಿಧಾನಗಳ  ಮೂಲಕ ಮತ್ತು ಚಿತ್ರಕಲೆ ಮುಂತಾದ ಭಿನ್ನ ಚಟುವ...