ಭಂಡಾರ್ಕಾರ್ಸ್ :ಏನ್ ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ:
ಭಂಡಾರ್ಕಾರ್ಸ್ :ಏನ್ ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ
ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ 22-23ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನವೆಂಬರ್ 19ರಂದು ನೆರವೇರಿತು.
ಡಾ.ರೇಖಾ ವಿ ಬನ್ನಾಡಿ, ನಿವ್ರತ್ತ ಪ್ರಾಧ್ಯಾಪಕರು, ಕನ್ನಡ ವಿಭಾಗ, ಭಂಡಾರ್ಕರ್ಸ್ ಕಾಲೇಜು ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಏನ್ ಎಸ್ ಎಸ್ ನ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ, ಶ್ರಮದಾನ, ಸಮಾಜಸೇವೆಯ ಮಹತ್ವದೊಂದಿಗೆ ಜೀವನ ಕೌಶಲ್ಯವನ್ನು ಈ ಎನ್ನ ಎಸ್ ಎಸ್ ಕಲಿಸಿ ಕೊಡುತ್ತದೆ ಎಂದು ತಿಳಿಸಿದರು. ಯೋಜನಾಧಿಕಾರಿಗಳಾದ ರಾಮಚಂದ್ರ ಆಚಾರ್, ಅರುಣ್ ಎ ಎಸ್, ಹಾಗೂ ಸಹ ಯೋಜಾನಾಧಿಕಾರಿ ಶ್ರೀಮತಿ ಸ್ವಪ್ನ ಹಾಗೂ ಇತರ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ಜಾಸನಿನ್ ಪ್ರಥಮ ಬಿಕಾಂ ಅತಿಥಿಗಳನ್ನು ಸ್ವಾಗತಿಸಿದರು, ಕುಮಾರಿ ರಕ್ಷಿತಾ, ದ್ವಿತೀಯ ಬಿಎಸ್ಸಿ ವಂದಿಸಿದರು ಹಾಗೂ ಕುಮಾರಿ ಪಂಚಮಿ, ತೃತೀಯ ಬಿಎಸ್ಸಿ ಕಾರ್ಯಕ್ರಮ ನಿರ್ವಹಿಸಿದರು.
Comments
Post a Comment