ಭಂಡಾರ್ಕಾರ್ಸ್ : ರೇಡಿಯೋ ಕುಂದಾಪ್ರ 89.6 FM ಸಮುದಾಯ ಬಾನುಲಿ ಕೇಂದ್ರದ ಲಾಂಛನ ಮತ್ತು ರಾಗ ಬಿಡುಗಡೆ ಕುಂದಾಪುರ : ನಿಮ್ಮ ಒಳಗೊಂದು ಕಿಚ್ಚು ಹುಟ್ಟಬೇಕು . ನಮ್ಮವರೇ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹ ನೀಡಿದಾಗ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ . ಕುಂದಾಪುರ ಪರಿಸರ ಭಾಗದಲ್ಲಿ ಹಲವರು ಕಲೆಗಳಿವೆ ಅವುಗಳಿಗೆ ಇದರ ಉಪಯೋಗವಾಗಲಿ ಇವತ್ತಿನ ವರೆಗಿನ ಹಾದಿಯ ನನ್ನ ದುಡಿಮೆಯ 20 ಶೇಕಡಾ ಮಾತ್ರ ನನಗಾಗಿ ಉಳಿದ 80 ಶೇಕಡಾ ಸಮಾಜಕ್ಕಾಗಿ ಎಂಬ ಪಾಲಿಸಿ ಹಾಕಿಕೊಂಡು ಬರುತ್ತಿದ್ದೇನೆ . ರೇಡಿಯೋ ಎನ್ನುವುದು ಮೊಬೈಲ್ ಅಥವಾ ಉಳಿದ ಮಾಧ್ಯಮಗಳಿಗಿಂತ ಭಿನ್ನ . ಇದರ ಹಿಂದಿನ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು . ...
ಇನ್ಸ್ಟಿಟ್ಯೂಷನ್ ಇನ್ನೋವೇಶನ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ ಕುಂದಾಪುರ : ಅಕ್ಟೋಬರ್ 6 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಿರಿಜಾ ಅತ್ತೀಗೇರಿ ಡಿಸೈನ್ ಥಿಂಕಿಂಗ್ ಮತ್ತು ಐಡಿಯೇಟ್ ಎಂಬ ವಿಷಯದ ಕುರಿತು ಮಾತನಾಡಿದರು . ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಮಣಿಪಾಲದ ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸುಚೇತಾ ವಿ . ಕೋಟೇಕಾರ್ ಅವರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಉಪಯೋಗವನ್ನು ಕುರಿತು ಮಾಹಿತಿ ನೀಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ . ಶುಭಕರಾಚಾರಿ ಮಾತನಾಡಿ ನೀವು ಉದ್ಯೋಗದಾತರಾಗಿ ಬೆಳೆಯಬೇಕು ಎಂದು ಹೇಳಿದರು . ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ , ಐಕ್ಯೂಎಸಿ ಸಂಯೋಜ...
Comments
Post a Comment