ಪ್ಲಾಸ್ಟಿಕ್ ಮತ್ತು ತ್ಯಾಜ್ಯ ನಿರ್ವಹಣೆ ಮಾಹಿತಿ ಕಾರ್ಯಾಗಾರ
ಕುಂದಾಪುರ : "ಅತಿಯಾದ ಬೆಳವಣಿಗೆ ನಮ್ಮ ಹಿರಿಯರ ಅಥವಾ ಪೂರ್ವಿಕರು ಬೆಳೆಸಿದ ಪರಿಸರವನ್ನ ನಾವು ಹಾಳು ಮಾಡುತ್ತಿದ್ದೇವೆ. ಈ ಪರಿಸರವನ್ನು ಹಾಳು ಮಾಡಲು ನಮಗೆ ಯಾವುದೇ ಹಕ್ಕಿಲ್ಲಾ " ಎಂದು ಗುರುಪ್ರಸಾದ್ ಶೆಟ್ಟಿ ಪರಿಸರ ಅಭಿಯುತರರು ಪುರಸಭೆ ಕುಂದಾಪುರ ಇವರು ಹೇಳಿದರು. ಅವರು ಇತ್ತೀಚಿಗೆ ಇಲ್ಲಿನ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪುರಸಭೆ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ನಿರ್ವಹಣೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಾನವನು ತನ್ನ ದೈನಂದಿನ ಬದುಕಿನಲ್ಲಿ ತಾನು ಬಳಸಿ ಎಸೆಯುವ ವಸ್ತುಗಳನ್ನ ಕ್ರಮಬದ್ಧವಾಗಿ ಸಂಗ್ರಹಣೆ ಮಾಡಿ ಸಂಸ್ಕರಣೆ,ಮರುಬಳಕೆ ಹಾಗೂ ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ವಿವರಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎನ್. ಪಿ. ನಾರಾಯಣ್ ಶೆಟ್ಟಿ ಪ್ರಾಂಶುಪಾಲರು, ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ವಹಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗೋಪಾಲ್ ಕೃಷ್ಣ ಶೆಟ್ಟಿ ಮುಖ್ಯ ಅಧಿಕಾರಿ ಪುರಸಭೆ ಕುಂದಾಪುರ ಮತ್ತು ರಾಮಚಂದ್ರ ಆಚಾರಿ ಎನ್.ಎಸ್.ಎಸ್ ಯೋಜನಾಧಿಕಾರಿ ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ಉಪಸ್ಥಿತರಿದ್ದರು
200ಕ್ಕೂ ಹೆಚ್ಚು ಎನ್.ಎಸ್. ಎಸ್ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವಿದ್ಯಾರ್ಥಿನಿ ಭಾನುಪ್ರಿಯ ಸ್ವಾಗತಿಸಿ, ಚಿತ್ರಾ ನಿರೂಪಿಸಿ, ಸಿಂಚನಾ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು
Comments
Post a Comment