Posts
Showing posts from September, 2023
ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ
- Get link
- X
- Other Apps
ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕುಂದಾಪುರ : ರಾಷ್ಟ್ರೀಯ ಸೇವಾ ಯೋಜನೆ , ಭಂಡಾರ್ಕಾರ್ಸ್ ಕಾಲೇಜು , ಕುಂದಾಪುರ ಇದರ 2023-24 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ದಿನಾಂಕ 20-09-2023 ರಂದು ನೆರವೇರಿತು . ದೀಪ ಬೆಳಗಿಸುವುದರ ಮೂಲಕ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಗಿದ್ದ ಪ್ರೊ ಜಿ . ಎಸ್ . ಹೆಗಡೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಏನ್ . ಎಸ್ . ಎಸ್ ನ ಧ್ಯೇಯ್ಯೋದ್ದೇಶಗಳು , ಅದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಿಸಿ ಶುಭ ಹಾರೈಸಿದರು . ಪ್ರಾಂಶುಪಾಲರಾದ ಡಾ . ಶುಭಕಾರಾಚಾರಿ ಇವರು ಏನ್ . ಎಸ್ . ಎಸ್ ನ ಮಹತ್ವ ಮತ್ತು ಅಗತ್ಯತೆ ಬಗ್ಗೆ ತಿಳಿಸಿದರು . ಈ ಕಾರ್ಯಕ್ರಮದಲ್ಲಿ ಡಾ . ವಿಜಯ ಕುಮಾರ್ ಕೆ . ಎಂ ., ಐಕ್ಯೂಎಸಿ ಸಂಯೋಜಕರು , ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ರಾಮಚಂದ್ರ ಆಚಾರ್ ಹಾಗೂ ಉಪನ್ಯಾಸಕವೃಂದದವರು ಉಪಸ್ಥಿತರಿದ್ದರು . ಸ್ವಯಂಸೇವಕರಾದ ಕುಮಾರಿ ಶ್ರದ್ಧಾ ಸ್ವಾಗತಿಸಿದರು , ಕುಮಾರಿ ಸುಧೀಕ್ಷಾ ಅತಿಥಿಗಳನ್ನು ಪರಿಚಯಿಸಿದರು , ಕುಮಾರಿ ಕವನಾ ವಂದಿಸಿದರು ಹಾಗೂ ಕುಮಾರಿ ಶ್ರೀಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು .
ಯೂಥ್ ರೆಡ್ ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ
- Get link
- X
- Other Apps
ಯೂಥ್ ರೆಡ್ ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಹಾಗೂ ಜೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ , ಮಾದಕ ವಸ್ತುಗಳ ವಿರುದ್ಧ ಜಾಗೃತಿ , ವಿದ್ಯಾರ್ಥಿವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಕುಂದಾಪುರ : ಯಾವುದೇ ಫಲಾಪೇಕ್ಷೆಗಳಿಲ್ಲದೆ ಜನರು ಜನರಿಗಾಗಿ ಸಹಾಯ ಮಾಡುವುದು ರೆಡ್ ಕ್ರಾಸ್ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕು ಘಟಕದ ಸಭಾಪತಿಗಳಾದ ಎಸ್ . ಜಯಕರ ಶೆಟ್ಟಿ ಹೇಳಿದರು . ಅವರು ಸೆಪ್ಟೆಂಬರ್ 20 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಯೂಥ್ ರೆಡ್ ಕ್ರಾಸ್ ಘಟಕದ ಕಾರ್ಯಚಟುವಟಿಕೆಗಳ ಹಾಗೂ ಜೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ , ಮಾದಕ ವಸ್ತುಗಳ ವಿರುದ್ಧ ಜಾಗೃತಿ , ವಿದ್ಯಾರ್ಥಿವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು . ರೆಡ್ ಕ್ರಾಸ್ ಸಂಸ್ಥೆಯು ಯಾವುದೇ ವಿಪತ್ತಿನ ಸಂದರ್ಭದಲ್ಲಿ ಕಷ್ಟಕ್ಕೆ ಸ್ಪಂದಿಸುವ , ಸಹಾಯ ಮತ್ತು ಪರಿಹಾರ ಕಾರ್ಯಾಚರಣೆಗೆ ತನ್ನನ್ನು ತಾನು ತೊಡಗಿಸಿಕೊಳ್ಳುವ ಸಂಸ್ಥೆಯಾಗಿದೆ . ಸಂಸ್ಥೆಯ ಸ್ವಯಂ ಸೇವಕರು ಮ...
ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ
- Get link
- X
- Other Apps
ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಕುಂದಾಪುರ : ಇತ್ತೀಚೆಗೆ ರಾಷ್ಟ್ರೀಯ ಸೇವಾ ಯೋಜನೆ , ಭಂಡಾರ್ಕಾರ್ಸ್ ಕಾಲೇಜು , ಕುಂದಾಪುರ ಹಾಗೂ ವಲಯ ಅರಣ್ಯ ಅಧಿಕಾರಿಗಳ ವಿಭಾಗ ಕುಂದಾಪುರ , ಕರ್ನಾಟಕ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು . ಸುಮಾರು 70 ಏನ್ ಎಸ್ ಎಸ್ ಸ್ವಯಂ ಸೇವಕರುಗಳು , 70 ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಈ ಬ್ರಹತ್ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಈ ಕಾರ್ಯಕ್ರಮ ದಲ್ಲಿ ಉಪ ಅರಣ್ಯಅಧಿಕಾರಿಗಳಾದ ಉದಯ ನಾಯಕ್ , ACF ಶ್ರೀ ಕ್ಲಿಫರ್ಡ್ ಲೂಬೋ , ವಲಯ ಅರಣ್ಯಧಿಕಾರಿಗಳಾದ ಕಿರಣ್ ಬಾಬು , ಉಪ ವಲಯ ಅರಣ್ಯಧಿಕಾರಿಗಳಾದ ಉದಯ ಹಾಗೂ ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ಅರುಣ್ ಎ ಎಸ್ ಹಾಗೂ ರಾಮಚಂದ್ರ ಆಚಾರ್ ಉಪಸ್ಥಿತರಿದ್ದರು .
ಹಿಂದಿ ದಿವಸ್ - ಜ್ಯೋತ್ಸ್ನಾ" ಕಾರ್ಯಕ್ರಮ
- Get link
- X
- Other Apps
ಭಾಷೆಯು ದೇಶದ ಐಕ್ಯತೆ ಮತ್ತು ಮಾನವನ ಸಾಮಾಜಿಕ ಜೀವನದ ಮಹತ್ವದ ಸಂವಹನದ ಮಾಧ್ಯಮ: ಡಾ. ಮಂಜುನಾಥ ಉಡುಪ ಕುಂದಾಪುರ: ಭಾಷೆಯು ದೇಶದ ಐಕ್ಯತೆ ಮತ್ತು ಮಾನವನ ಸಾಮಾಜಿಕ ಜೀವನದ ಮಹತ್ವದ ಸಂವಹನದ ಮಾಧ್ಯಮ ಎಂದು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಅವರು ಹೇಳಿದರು. ಸೆಪ್ಟೆಂಬರ್ 14ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗ ಆಯೋಜಿಸಿದ್ದ " ಹಿಂದಿ ದಿವಸ್ - ಜ್ಯೋತ್ಸ್ನಾ" ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯತೆಯನ್ನು ಬಿಂಬಿಸುವ ಹಿಂದಿ ಭಾಷೆಯು ಅನೇಕ ಭಾಷೆಗಳ ಪದಗಳನ್ನು ತನ್ನೊಳಗೆ ಸೇರಿಸಿಕೊಂಡು ದೇಶವನ್ನು ಒಗ್ಗೂಡಿಸುವ ಹಾದಿಯಲ್ಲಿದೆ. ದೇಶದ ಮತ್ತು ಜಾಗತಿಕವಾಗಿ ಅತಿ ಹೆಚ್ಚು ಜನರು ಸಂವಾದ ನಡೆಸುವ ಭಾಷೆ ಹಿಂದಿ. ಜನರ ಬದುಕಿನಲ್ಲಿ ಭಾಷಾ ಬೇಧದ ಯಾವ ಮಡಿವಂತಿಕೆಯೂ ಅನ್ವಯವಾಗುವುದಿಲ್ಲ. ಹಿಂದಿ ಭಾಷೆಯು ಭಾರತದ ಗರಿಮೆಯ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರನ್ನು ಹಿಂದಿ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಕ...
ಭಾಷೆಯು ದೇಶದ ಐಕ್ಯತೆ : ಡಾ. ಮಂಜುನಾಥ ಉಡುಪ
- Get link
- X
- Other Apps
ಭಾಷೆಯು ದೇಶದ ಐಕ್ಯತೆ : ಡಾ. ಮಂಜುನಾಥ ಉಡುಪ ಕುಂದಾಪುರ: ಭಾಷೆಯು ದೇಶದ ಐಕ್ಯತೆ ಮತ್ತು ಮಾನವನ ಸಾಮಾಜಿಕ ಜೀವನದ ಮಹತ್ವದ ಸಂವಹನದ ಮಾಧ್ಯಮ ಎಂದು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಉಡುಪ ಅವರು ಹೇಳಿದರು. ಸೆಪ್ಟೆಂಬರ್ 14ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಹಿಂದಿ ವಿಭಾಗ ಆಯೋಜಿಸಿದ್ದ "ಹಿಂದಿ ದಿವಸ್ - ಜ್ಯೋತ್ಸ್ನಾ" ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯತೆಯನ್ನು ಬಿಂಬಿಸುವ ಹಿಂದಿ ಭಾಷೆಯು ಅನೇಕ ಭಾಷೆಗಳ ಪದಗಳನ್ನು ತನ್ನೊಳಗೆ ಸೇರಿಸಿಕೊಂಡು ದೇಶವನ್ನು ಒಗ್ಗೂಡಿಸುವ ಹಾದಿಯಲ್ಲಿದೆ. ದೇಶದ ಮತ್ತು ಜಾಗತಿಕವಾಗಿ ಅತಿ ಹೆಚ್ಚು ಜನರು ಸಂವಾದ ನಡೆಸುವ ಭಾಷೆ ಹಿಂದಿ. ಜನರ ಬದುಕಿನಲ್ಲಿ ಭಾಷಾ ಬೇಧದ ಯಾವ ಮಡಿವಂತಿಕೆಯೂ ಅನ್ವಯವಾಗುವುದಿಲ್ಲ. ಹಿಂದಿ ಭಾಷೆಯು ಭಾರತದ ಗರಿಮೆಯ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅವರನ್ನು ಹಿಂದಿ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವ...
ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪರಿಷ್ಕೃತ ಪದವಿ ಮಟ್ಟದ ಇತಿಹಾಸ ಪಠ್ಯಗಳ ಅವಲೋಕನ"
- Get link
- X
- Other Apps
ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪರಿಷ್ಕೃತ ಪದವಿ ಮಟ್ಟದ ಇತಿಹಾಸ ಪಠ್ಯಗಳ ಅವಲೋಕನ" ಕುಂದಾಪುರ: ಸೆಪ್ಟೆಂಬರ್ 7ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಮತ್ತು ಮಾನುಷಾ- ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಇತಿಹಾಸ ಅಧ್ಯಾಪಕರ ಸಂಘದ ಸಹಯೋಗದಲ್ಲಿ "ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪರಿಷ್ಕೃತ ಪದವಿ ಮಟ್ಟದ ಇತಿಹಾಸ ಪಠ್ಯಗಳ ಅವಲೋಕನ" ಎಂಬ ರಾಜ್ಯ ಮಟ್ಟದ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಎಸ್. ಸದಾನಂದ ಛಾತ್ರ ಮಾತನಾಡಿ ಹೊಸತನಕ್ಕೆ ಬದಲಾವಣೆಯಾಗುವಾಗ ಸಮಯ ಮತ್ತು ಅವಕಾಶ ಬೇಕಾಗುತ್ತದೆ. ಇಂತಹ ಕಾರ್ಯಾಗಾರಗಳು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಬದಲಾವಣೆಗೆ ತೆರೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ.ವಿಜಯ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಉಪಸ್ಥಿತರಿದ್ದರು. ಮಾನುಷಾ ಇದರ ಅಧ್ಯಕ್ಷರಾದ ಜಯರಾಮ್ ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ನವೀನ್ ಕೊಣಾಜೆ...
ಐ.ಎ.ಎಸ್,ಐ.ಪಿ.ಎಸ್ ಹಾಗೂ ಕೆ.ಎ.ಎಸ್ ಕುರಿತು ಮಾಹಿತಿ
- Get link
- X
- Other Apps
ಐ.ಎ.ಎಸ್,ಐ.ಪಿ.ಎಸ್ ಹಾಗೂ ಕೆ.ಎ.ಎಸ್ ಕುರಿತು ಮಾಹಿತಿ ಕುಂದಾಪುರ : ಸೆಪ್ಟೆಂಬರ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಮತ್ತು ಬೆಂಗಳೂರಿನ ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇವರ ಸಹಯೋಗದಲ್ಲಿ ದಿ. ಶ್ರೀ ಸುನೀಲ್ ಚಾತ್ರ ಇವರ ಸವಿನೆನಪಿಗಾಗಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಐ.ಎ.ಎಸ್,ಐ.ಪಿ.ಎಸ್ ಹಾಗೂ ಕೆ.ಎ.ಎಸ್ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಕುಂದಾಪುರದ ಶ್ರೀ ದುರ್ಗಾಂಬಾ ಮೋಟಾರ್ಸ್ ನ ಮಾಲಕರಾದ ಸುಪ್ರೀತ್ ಚಾತ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಯು.ಪಿ.ಎಸ್.ಸಿ ಫ್ಯಾಕಲ್ಟಿ ಪ್ರಭುಲಿಂಗ ಬಿ.ಕೆ. ಅವರು ಐ.ಎ.ಎಸ್,ಐ.ಪಿ.ಎಸ್ ಹಾಗೂ ಕೆ.ಎ.ಎಸ್ ಕುರಿತು ವಿಶೇಷ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು. ರೋಟರಿ ಕ್ಲಬ್ ನ ವಲಯ ಲೆಪ್ಟಿನೆಂಟ್ ವಲಯ 1 ಉತ್ತಮ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ಸುರೇಶ್ ಮಲ್ಯ, ಓಂ ಟೈಲ್ಸ್ ನಾ ಸಚಿನ್ ನಕ್ಕತ್ತಾಯ, ಕುಂದಪ್ರಭ ಪತ್ರಿಕೆಯ ಸಂಪಾದಕರಾದ ಯು.ಎಸ್.ಶೆಣೈ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಕಾರ್ಯದರ್ಶ...
ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ. ಇವರಿಗೆ ಯುಥ್ ಎಫರ್ಟ್ಸ್ ಫಾರ್ ಸೊಸೈಟಿ ಇವರು ಕೊಡಮಾಡುವ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ
- Get link
- X
- Other Apps
ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ. ಇವರಿಗೆ ಯುಥ್ ಎಫರ್ಟ್ಸ್ ಫಾರ್ ಸೊಸೈಟಿ ಇವರು ಕೊಡಮಾಡುವ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ. ಇವರಿಗೆ ಯುಥ್ ಎಫರ್ಟ್ಸ್ ಫಾರ್ ಸೊಸೈಟಿ ಇವರು ಕೊಡಮಾಡುವ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಗೌರವ ದೊರೆತಿದೆ. ಇವರಿಗೆ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕೋದ್ಯಮ ವಿಭಾಗದ ಸಾಧನಾ ವಿಶೇಷ ಸಂಚಿಕೆ
- Get link
- X
- Other Apps
ಬಿತ್ತಿಪತ್ರಿಕೆ ಸಾಧನಾದಲ್ಲಿ "ಶಿಕ್ಷಕರ ದಿನಾಚರಣೆ" ಕುರಿತು ವಿಶೇಷ ಸಂಚಿಕೆ ಬಿಸಿಲೆ: ಸೆಪ್ಟೆಂಬರ್ 5ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಯುಕ್ತ ವಿಭಾಗದ ಪ್ರಾಯೋಗಿಕ ಬಿತ್ತಿಪತ್ರಿಕೆ ಸಾಧನಾದಲ್ಲಿ "ಶಿಕ್ಷಕರ ದಿನಾಚರಣೆ" ಕುರಿತು ವಿಶೇಷ ಸಂಚಿಕೆಯನ್ನು ಪ್ರಕಟಗೊಳಿಸಿದರು. ಶಿಕ್ಷಕರ ದಿನಾಚರಣೆ ಕುರಿತ ಲೇಖನ ಬರಹಗಳು ವಿದ್ಯಾರ್ಥಿಗಳು ಪ್ರಕಟಿಸಿದರು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
- Get link
- X
- Other Apps
ಶಿಕ್ಷಕರ ದಿನಾಚರಣೆ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಅಧ್ಯಾಪಕರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ವಿ.ನಾರಾಯಣಸ್ವಾಮಿ ರಾಧಾಕೃಷ್ಣನ್ ಅವರ ಬದುಕೆ ಆದರ್ಶ ಪ್ರಾಯ ಅವರು ವ್ಯಕ್ತಿತ್ವವೇ ಭವ್ಯ. ಅವರು ಬದುಕಿನ ಪುಟಗಳಲ್ಲಿ ಶಿಸ್ತುಬದ್ಧತೆ, ಜ್ಞಾನದ ಆಳ ಶಿಕ್ಷಕರಾದ ನಮಗೆ ದಾರಿದೀಪವಾಗಲಿ ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಿ.ಲಲಿತಾದೇವಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಐಕ್ಯೂಎಸಿ ಸಂಯೋಜಕರಾದ ಡಾ.ಕೆ.ಎಂ.ಉದಯ ಕುಮಾರ್ ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಎಂ.ವಿ ನಾರಾಯಣ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಾಪಕರ ಸಂಘದ ಉಪಾಧ್ಯಕ್ಷೆ ಸರೋಜಾ ಎಂ. ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ದುರ್ಗಾಪ್ರಸಾದ್ ಮಯ್ಯ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸುಮಲತಾ ನಾಯ್ಕ ವಂದಿಸಿದರು.