ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ
ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಚಟುವಟಿಕೆಗಳ
ಉದ್ಘಾಟನಾ
ಕುಂದಾಪುರ: ರಾಷ್ಟ್ರೀಯ
ಸೇವಾ ಯೋಜನೆ,ಭಂಡಾರ್ಕಾರ್ಸ್ ಕಾಲೇಜು,
ಕುಂದಾಪುರ ಇದರ 2023-24ನೇ ಸಾಲಿನ ವಾರ್ಷಿಕ
ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ದಿನಾಂಕ 20-09-2023 ರಂದು ನೆರವೇರಿತು.
ದೀಪ ಬೆಳಗಿಸುವುದರ ಮೂಲಕ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ
ಪ್ರಾಧ್ಯಾಪಕರಾದ ವಾಣಿಜ್ಯ ವಿಭಾಗದ ಮುಖ್ಯಸ್ಥ
ರಾಗಿದ್ದ ಪ್ರೊ ಜಿ. ಎಸ್.
ಹೆಗಡೆ ದೀಪ ಬೆಳಗಿಸುವುದರ ಮೂಲಕ
ಉದ್ಘಾಟಿಸಿ ಏನ್.ಎಸ್. ಎಸ್
ನ ಧ್ಯೇಯ್ಯೋದ್ದೇಶಗಳು, ಅದರಿಂದಾಗುವ
ಪ್ರಯೋಜನಗಳ ಬಗ್ಗೆ ವಿವರಿಸಿ ಶುಭ
ಹಾರೈಸಿದರು.
ಪ್ರಾಂಶುಪಾಲರಾದ ಡಾ.
ಶುಭಕಾರಾಚಾರಿ ಇವರು ಏನ್.ಎಸ್.
ಎಸ್ ನ ಮಹತ್ವ ಮತ್ತು
ಅಗತ್ಯತೆ ಬಗ್ಗೆ ತಿಳಿಸಿದರು. ಈ
ಕಾರ್ಯಕ್ರಮದಲ್ಲಿ ಡಾ. ವಿಜಯ ಕುಮಾರ್
ಕೆ. ಎಂ., ಐಕ್ಯೂಎಸಿ ಸಂಯೋಜಕರು,ಏನ್ ಎಸ್ ಎಸ್
ಯೋಜನಾಧಿಕಾರಿಗಳಾದ ರಾಮಚಂದ್ರ
ಆಚಾರ್ ಹಾಗೂ ಉಪನ್ಯಾಸಕವೃಂದದವರು ಉಪಸ್ಥಿತರಿದ್ದರು.ಸ್ವಯಂಸೇವಕರಾದ ಕುಮಾರಿ ಶ್ರದ್ಧಾ ಸ್ವಾಗತಿಸಿದರು,
ಕುಮಾರಿ ಸುಧೀಕ್ಷಾ ಅತಿಥಿಗಳನ್ನು ಪರಿಚಯಿಸಿದರು,ಕುಮಾರಿ ಕವನಾ ವಂದಿಸಿದರು
ಹಾಗೂ ಕುಮಾರಿ ಶ್ರೀಲಕ್ಷ್ಮಿ ಕಾರ್ಯಕ್ರಮ
ನಿರ್ವಹಿಸಿದರು.
Comments
Post a Comment