BCK: Literary Exhibition at library

ಭಂಡಾರ್ಕಾರ್ಸ್ : ಗ್ರಂಥಾಲಯದಲ್ಲಿ ಸಾಹಿತ್ಯ ಪ್ರದರ್ಶನ ಕುಂದಾಪುರ : ನವೆಂಬರ್ 2 ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಗ್ರಂಥಾಲಯದಲ್ಲಿ " ನವೆಂಬರ್ 1 ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಪುಸ್ತಕಗಳ ಪ್ರದರ್ಶನ " ಕಾರ್ಯಕ್ರಮ ನಡೆಯಿತು . ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ . ಶುಭಕರಾಚಾರಿ ಅವರು ಮಾತನಾಡಿ ಕನ್ನಡ ನಮ್ಮ ಭಾಷೆ . ಎಲ್ಲಾ ತಾಯಂದಿರನ್ನು ಪ್ರೀತಿಸಿ ಆದರೆ ನಮ್ಮ ನಾಡು ನುಡಿಯನ್ನು ಹೆಚ್ಚು ಪ್ರೀತಿಸಿ ಎಂದು ಹೇಳಿದರು . ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ . ಜಿ . ಎಂ . ಗೊಂಡ ಉಪಸ್ಥಿತರಿದ್ದರು . ಗ್ರಂಥಾಲಪಾಲಕರಾದ ಮನೋಹರ್ ಉಪಾಧ್ಯಾಯ ವಂದಿಸಿದರು .