ಇನ್ಸ್ಟಿಟ್ಯೂಷನ್ ಇನ್ನೋವೇಶನ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

 

ಇನ್ಸ್ಟಿಟ್ಯೂಷನ್ ಇನ್ನೋವೇಶನ ಕೋಶ ಇದರ ಸಹಯೋಗದಲ್ಲಿ  

ಉಪನ್ಯಾಸ ಕಾರ್ಯಕ್ರಮ






ಕುಂದಾಪುರ: ಅಕ್ಟೋಬರ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಹಯೋಗದಲ್ಲಿ  ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ  ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಿರಿಜಾ ಅತ್ತೀಗೇರಿ  ಡಿಸೈನ್ ಥಿಂಕಿಂಗ್ ಮತ್ತು ಐಡಿಯೇಟ್ ಎಂಬ ವಿಷಯದ ಕುರಿತು ಮಾತನಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ  ಮಣಿಪಾಲದ ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸುಚೇತಾ ವಿ.ಕೋಟೇಕಾರ್  ಅವರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಉಪಯೋಗವನ್ನು ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮಾತನಾಡಿ ನೀವು ಉದ್ಯೋಗದಾತರಾಗಿ ಬೆಳೆಯಬೇಕು ಎಂದು ಹೇಳಿದರು.

ಸಂದರ್ಭದಲ್ಲಿ ವೇದಿಕೆಯಲ್ಲಿ  ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಐಕ್ಯೂಎಸಿ ಸಂಯೋಜಕರಾದ ಡಾ.ವಿಜಯ ಕುಮಾರ್ ಉಪಸ್ಥಿತರಿದ್ದರು.

ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಂಯೋಜಕರಾದ ಡಾ.ಲಲಿತಾದೇವಿ ಸ್ವಾಗತಿಸಿದರು.

ಬಿ.ಬಿ. ವಿದ್ಯಾರ್ಥಿನಿಯರಾದ ಆಯೇಷಾ ಮುಸ್ಕಾನ್ ಫಿರ್ಜಾದೆ ಕಾರ್ಯಕ್ರಮ ನಿರೂಪಿಸಿದರು.ಸಾಹಿತಿ ಮತ್ತು ಶ್ರಾವ್ಯ ಪರಿಚಯಿಸಿದರು.ಲೇಖನಾ ವಂದಿಸಿದರು.


Comments

Post a Comment

Popular posts from this blog