Posts

ಅಗ್ನಿ ಸುರಕ್ಷತೆ ಅರಿವು ಕಾರ್ಯಕ್ರಮ

Image
 ಅಗ್ನಿ ಸುರಕ್ಷತೆ  ಅರಿವು ಕಾರ್ಯಕ್ರಮ ಕುಂದಾಪುರ, ಮೇ 24: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಇಲ್ಲಿನ ಐಕ್ಯೂಎಸಿ,  ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಶಾಖೆ ಅವರ ಸಹಯೋಗದಲ್ಲಿ ಅಗ್ನಿ ಸುರಕ್ಷತೆ  ಅರಿವು ಕಾರ್ಯಕ್ರಮ ನಡೆಯಿತು. ಭಾಲಕೃಷ್ಣ ,ಅಧಿಕಾರಿಗಳು ಅಗ್ನಿಶಾಮಕ ಇಲಾಖೆ ಕೋಣಿ ಕುಂದಾಪುರ,  ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಅಗ್ನಿ ಸುರಕ್ಷತೆಯ ಕುರಿತು ಅರಿವು ಮೂಡಿಸಿದರು. ಡಾ. ಎನ್.ಪಿ ನಾರಾಯಣ್ ಶೆಟ್ಟಿ ಪದವಿ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.   ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಗ್ನಿಶಾಮಕ ಇಲಾಖೆ ಕೋಣಿ, ಕುಂದಾಪುರ ಇಲ್ಲಿನ ಅಧಿಕಾರಿಗಳಾದ ಕೃಷ್ಣನಂದಾ. ಟಿ. ಗೌಡ  ಎಸ್. ಜಯಕರ್ ಶೆಟ್ಟಿ ಅಧ್ಯಕ್ಷರು ಐಆರ್ ಸಿ ಎಸ್ ಕುಂದಾಪುರ ತಾಲೂಕು ಶಾಖೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರ ಆಚಾರಿ ,ಐಕ್ಯೂಎಸಿ ಸಂಯೋಜಕರಾದ ಡಾ. ಕೆ. ಎಮ್. ವಿಜಯ್ ಕುಮಾರ್ , ಕಾಲೇಜಿನ ರೆಡ್ ಕ್ರಾಸ್ ಘಟಕದ  ಪ್ರೊ.ಸತ್ಯನಾರಾಯಣ ಕಾರ್ಯಕ್ರಮ ಸಂಯೋಜಕರು, ಎನ್ಎಸ್ಎಸ್ ಯೋಜನಾಧಿಕಾರಿ ರಾಮಚಂದ್ರ ಆಚಾರ್  ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅರ್ಪಿತಾ ಸ್ವಾಗತಸಿ, ವಿದ್ಯಾರ್ಥಿನಿ ಸೊನಲಿ ನಿರೂಪಿಸಿ ಮತ್ತು...

ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ

Image
ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ   ಕುಂದಾಪುರ:ದಿನಾಂಕ 19-05-2023 ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ  ನಡೆಯಿತು. ಕಾರ್ಯಕ್ರಮವನ್ನು ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಕೃಷ್ಣ ಭಟ್  ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಅರುಣ್ ಎ ಎಸ್,  ರಾಮಚಂದ್ರ ಆಚಾರ್, ಅಣ್ಣಪ್ಪ ಪೂಜಾರಿ ಹಾಗೂ ಉಪನ್ಯಾಸಕರಾದ  ಗಿರಿರಾಜ್ ಭಟ್ ಉಪಸ್ಥಿತರಿದ್ದರು. 90 ವಿದ್ಯಾರ್ಥಿಗಳು ಒಂದು ದಿನದ ಈ ಶಿಬಿರದಲ್ಲಿ ಭಾಗವಹಿಸಿ ದೇವಸ್ಥಾನದ ಪರಿಸರವನ್ನು ಸ್ವಚ್ಛ ಗೊಳಿಸಿ, ಕೆರೆಯ ಹೂಳೆತ್ತುವ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.
 ಕುಂದಾಪುರ, 12: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಇಲ್ಲಿನ ಐಕ್ಯೂಎಸಿ, ಚುನಾವಣಾ ಸಾಕ್ಷರತ ಕ್ಲಬ್, ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ,ಎನ್. ಸಿ. ಸಿ., ಮತ್ತು ಜಿಲ್ಲಾ ಸ್ವಿಪ್ ಸಮಿತಿಯ ಅವರ ಸಹಯೋಗದಲ್ಲಿ ಮತದಾರರ ಅರಿವು ಕಾರ್ಯಕ್ರಮ ನಡೆಯಿತು.  ಡಾ.ಸದಾನಂದ ಬೈಂದೂರು, ಎಸ್ ವಿಈಈಪಿ ತರಬೇತುದಾರರು, ಶಿಕ್ಷಕರು  ಸರಕಾರಿ ಶಾಲೆ ಕುಂದಾಪುರ  ಮತ್ತು ರಾಘವೇಂದ್ರ ಕಿಣಿ, ಎಲೆಕ್ಷನ್ ಸೆಕ್ಟರ್ ಆಫೀಸರ್, ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್ ಕಟ್ಟೆ ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮತದಾನ ಮತ್ತು ಮತದಾರರ ಕುರಿತು ಅರಿವು ಮೂಡಿಸಿದರು.   ಡಾ. ಎನ್.ಪಿ ನಾರಾಯಣ್ ಶೆಟ್ಟಿ ಪದವಿ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.   ಈ ಸಂದರ್ಭದಲ್ಲಿ  ವೇದಿಕೆಯಲ್ಲಿ  ಶಶಿಕಾಂತ್ ಹಾತ್ವಾರ್ ಉಪನ್ಯಾಸಕರು ಭೌತಶಾಸ್ತ್ರ ವಿಭಾಗ ಮತ್ತು ಅರುಣ್ ಎ.ಎಸ್, ಎನ್ಎಸ್ಎಸ್ ಯೋಜನಾಧಿಕಾರಿ,   ಉಪಸ್ಥಿತರಿದ್ದರು.   ಡಾ.ಶುಭಕರ ಆಚಾರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸ್ವಾಗತಸಿ,ಎನ್ ಎಸ್ ಎಸ್ ಯೋಜನಾಧಿಕಾರಿ ರಾಮಚಂದ್ರ ಆಚಾರ್  ನಿರೂಪಿಸಿ, ಮತ್ತು  ರೆಡ್ ಕ್ರಾಸ್ ಯೋಜನಾಧಿಕಾರಿ ಸತ್ಯನಾರಾಯಣ ವಂದಿಸಿದರು

ಹೆತ್ತವರು ಮತ್ತು ಪೋಷಕರ ಸಮ್ಮಿಲನ

 ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಏಪ್ರಿಲ್ 8ರಂದು ಹೆತ್ತವರು ಮತ್ತು ಪೋಷಕರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ರವಿರಾಜ್ ನಾಯಕ್  ಮಾತನಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇರುವಂತಹ ನೆಲೆಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮನ್ನು ತಾವು ಮೊದಲು ಅರಿಯಬೇಕು. ತನ್ನಲ್ಲಿರುವ ಕೌಶಲಗಳನ್ನು ಗುರುತಿಸಿಕೊಳ್ಳಬೇಕು. ಜೊತೆಗೆ ಉತ್ತಮ ಅಂಕಗಳನ್ನು ಪಡೆಯುವುದು ತುಂಬಾ ಮುಖ್ಯ. ಅಲ್ಲದೆ ಸಾಮಾನ್ಯ ಜ್ಞಾನ ಅಷ್ಟೇ ಅಗತ್ಯ ಅಲ್ಲದೆ ಹೆತ್ತವರ ಜವಾಬ್ದಾರಿಯನ್ನು ನೆನಪಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರಭಾವತಿ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಆದಂ ಗುಲ್ವಾಡಿ, ರಾಜೇಂದ್ರ ಉರಾಳ್ ಪ್ರಾಕ್ತನ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸತ್ಯನಾರಾಯಣ ಸ್ವಾಗತಿಸಿದರು. ಇತಿಹಾಸ ಪ್ರಾಧ್ಯಾಪಕ ಪ್ರೊ. ಗೋಪಾಲ್ ಕೆ ವಂದಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ

Image
ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ   ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಹಯವದನ ಉಪಾಧ್ಯಾಯ ಮಾತನಾಡಿ ಸಂಶೋಧನೆಯ ಕಾರ್ಯ ನಿರಂತರವಾಗಿರಬೇಕು. ಸಂಶೋಧಕನಾದವನು ವೈಜ್ಞಾನಿಕ ನೆಲೆಯಲ್ಲಿ ಆಲೋಚಿಸಬೇಕು. ಅವರವರ ಆಯ್ಕೆಯ ವಿಷಯದಲ್ಲಿ ಆಸಕ್ತಿಯಿಂದ ಸಂಶೋಧನೆ ಮಾಡಬೇಕೆ ಹೊರತು ಕಾಟಾಚಾರಕ್ಕೆ ಮಾಡಬಾರದು. ಹಾಗೆ ಸಂಶೋಧನೆಯ ಮೂಲಕ ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.  ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕರು ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಯಶವಂತಿ ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ

Image
ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ    ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ ರೇಖಾ ಬನ್ನಾಡಿ ಅವರು ಬಸವಣ್ಣ ಮತ್ತು ನಾರಾಯಣಗುರು ಇಬ್ಬರು ಜನಸಾಮಾನ್ಯರ  ಸ್ವಸ್ಥವಾಗಿ  ಬದುಕಬೇಕು ಎಂಬುದರಲ್ಲಿ ನೆಲೆ ಕಂಡುಕೊಂಡವರು. ಅಂದು ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ಮತ್ತು ವರ್ಣಭೇದದಿಂದ ಶೈಕ್ಷಣಿಕ ಮತ್ತು ಸಮಾನ ಜೀವನದಲ್ಲಿ ತಾರತಮ್ಯತೆ ಇತ್ತು. ಕೇವಲ ಮಠ ಮಂದಿರಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ಈ ಕಾಲಘಟ್ಟದಲ್ಲಿ ಬಸವಣ್ಣ ತಾರತಮ್ಯವನ್ನು ಎಂದಿಗೂ ಒಪ್ಪಲಿಲ್ಲ. ತನ್ನ ಸಮಾಜದ ತಾರತಮ್ಯ ನೀತಿಯ ಕುರಿತು ತನ್ನನ್ನೇ ತಾನು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಭಕ್ತಿಯ ಆಂದೋಲನದಲ್ಲಿ ಬಸವಣ್ಣ ತನ್ನನ್ನು ಕಂಡರು.   ನಾರಾಯಣಗುರುಗಳ ತತ್ವ ಆದರ್ಶಗಳು ಸಹ ಸಾಮ್ಯತೆ ಇದೆ. ಇಬ್ಬರೂ ಸಮಾಜದ ಸಮಾನ ಬದುಕಿನಲ್ಲಿ ತಮ್ಮನ್ನು ಕಂಡುಕೊಂಡವರು. ಪ್ರಜಾಸತ್ತಾತ್ಮಕತೆ ಇವರಿಬ್ಬರಲ್ಲೂ ಇತ್ತು. ಇವರಿಬ್ಬರನ್ನು ಇಂದಿನ ಭಕ್ತರು ಬಂಧಿಯಾಗಿಸಿದ್ದಾರೆ ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯ...

ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ

Image
  ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಮತ್ತು ಸಂಸ್ಕೃತ ವಿಭಾಗದ ಸಹಯೋಗದಲ್ಲಿ ಸಂಶೋಧನಾ ವಿಧಾನದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಹಯವದನ ಉಪಾಧ್ಯಾಯ ಮಾತನಾಡಿ ಸಂಶೋಧನೆಯ ಕಾರ್ಯ ನಿರಂತರವಾಗಿರಬೇಕು. ಸಂಶೋಧಕನಾದವನು ವೈಜ್ಞಾನಿಕ ನೆಲೆಯಲ್ಲಿ ಆಲೋಚಿಸಬೇಕು. ಅವರವರ ಆಯ್ಕೆಯ ವಿಷಯದಲ್ಲಿ ಆಸಕ್ತಿಯಿಂದ ಸಂಶೋಧನೆ ಮಾಡಬೇಕೆ ಹೊರತು ಕಾಟಾಚಾರಕ್ಕೆ ಮಾಡಬಾರದು. ಹಾಗೆ ಸಂಶೋಧನೆಯ ಮೂಲಕ ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.  ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕರು ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಯಶವಂತಿ ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ

Image
  ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ " ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ" ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ ರೇಖಾ ಬನ್ನಾಡಿ ಅವರು ಬಸವಣ್ಣ ಮತ್ತು ನಾರಾಯಣಗುರು ಇಬ್ಬರು ಜನಸಾಮಾನ್ಯರ  ಸ್ವಸ್ಥವಾಗಿ  ಬದುಕಬೇಕು ಎಂಬುದರಲ್ಲಿ ನೆಲೆ ಕಂಡುಕೊಂಡವರು. ಅಂದು ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ಮತ್ತು ವರ್ಣಭೇದದಿಂದ ಶೈಕ್ಷಣಿಕ ಮತ್ತು ಸಮಾನ ಜೀವನದಲ್ಲಿ ತಾರತಮ್ಯತೆ ಇತ್ತು. ಕೇವಲ ಮಠ ಮಂದಿರಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ಈ ಕಾಲಘಟ್ಟದಲ್ಲಿ ಬಸವಣ್ಣ ತಾರತಮ್ಯವನ್ನು ಎಂದಿಗೂ ಒಪ್ಪಲಿಲ್ಲ. ತನ್ನ ಸಮಾಜದ ತಾರತಮ್ಯ ನೀತಿಯ ಕುರಿತು ತನ್ನನ್ನೇ ತಾನು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಭಕ್ತಿಯ ಆಂದೋಲನದಲ್ಲಿ ಬಸವಣ್ಣ ತನ್ನನ್ನು ಕಂಡರು.   ನಾರಾಯಣಗುರುಗಳ ತತ್ವ ಆದರ್ಶಗಳು ಸಹ ಸಾಮ್ಯತೆ ಇದೆ. ಇಬ್ಬರೂ ಸಮಾಜದ ಸಮಾನ ಬದುಕಿನಲ್ಲಿ ತಮ್ಮನ್ನು ಕಂಡುಕೊಂಡವರು. ಪ್ರಜಾಸತ್ತಾತ್ಮಕತೆ ಇವರಿಬ್ಬರಲ್ಲೂ ಇತ್ತು. ಇವರಿಬ್ಬರನ್ನು ಇಂದಿನ ಭಕ್ತರು ಬಂಧಿಯಾಗಿಸಿದ್ದಾರೆ ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ...

ಡಾ.ಎಂ.ಬಿ.ನಟರಾಜ್ ಸನ್ಮಾನ

Image
 ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಕಾಲೇಜಿನ  ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ. ಡಾ.ಎಂ.ಬಿ.ನಟರಾಜ್ ಇವರ ಸನ್ಮಾನ ಕುಂದಾಪುರ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಕಾಲೇಜಿನ  ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ. ಡಾ.ಎಂ.ಬಿ.ನಟರಾಜ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಲಲಿತಾದೇವಿ ಉಪಸ್ಥಿತರಿದ್ದರು. ಉಪನ್ಯಾಸಕಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ದುರ್ಗಾಪ್ರಸಾದ್ ಮಯ್ಯ ವಂದಿಸಿದರು.

"ದಿಶಾ ಭಾರತ್" ಕಾರ್ಯಾಗಾರ

Image
  "ದಿಶಾ ಭಾರತ್" ಕಾರ್ಯಾಗಾರ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಾರ್ಚ್ 29ರಂದು ಯುಥ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ "ದಿಶಾ ಭಾರತ್" ಎಂಬ ಕಾರ್ಯಾಗಾರ ನಡೆಯಿತು.  ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ನೇಹಾ ದಾಮ್ಲೆ ಮಾತನಾಡಿ ಜಗತ್ತಿಗೆ ಜೀವನ ಪಾಠವನ್ನು ತಿಳಿಸಿದ ದೇಶ ನಮ್ಮ ಭಾರತ. ನಮ್ಮ ದೇಶವನ್ನು ನಾವು ಅರಿಯಬೇಕು. ಪ್ರತಿಯೊಂದು ವಸ್ತುವಿನ ಯಾರಲ್ಲಿ ದೈವಿಕತೆಯನ್ನು ಕಾಣುವುದು ಭಾರತದ ಸಂಸ್ಕೃತಿ. ಹಾಗಾಗಿ ನಮ್ಮ ದೇಶವನ್ನು ಅರಿಯುವ ಪ್ರಯತ್ನ ಮಾಡಬೇಕು. ದೇಶವನ್ನು ಅರಿಯಬೇಕಾದರೆ ಮೊದಲು ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇಂದಿನ ಶಿಕ್ಷಣ  ವಿದ್ಯಾರ್ಥಿಗಳಿಗೆ  ಮೌಲ್ಯಾಧಾರಿತ ಬದುಕಿನ ಶಿಕ್ಷಣವನ್ನು ಕಲಿಸುವ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು ಇನ್ನೊಬ್ಬ ಅತಿಥಿ ಮಾನ್ವಿತಾ ಡಿ.ಮಾಸ್ಗೊಡೆ ಮಾತನಾಡಿ ಬದುಕಿನಲ್ಲಿ  ಬರುವಂತಹ ಸವಾಲುಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗುರುರಾಜ್ ರಾವ್, ಪ್ರಭೋಧನ ಸಂಚಾಲಕರು, ಮಂಗಳೂರು ವಿಭಾಗ, ಆಪ್ತ ಸಮಾಲೋಚಕಿ ಸ್ವರ್ಣ ಕುಂದಾಪುರ, ಶೀತಲ್, ಉಪನ್ಯಾಸಕಿ, ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಕುಂದಾಪುರ, ವಿದ್ಯಾರ್ಥಿ ಕ...

University Rank Holders-2022

Image
 

Rank Holders In BCA-2021-2022

Image
Congratulations to all the rank holders in the BCA program. Your hard work, dedication, and commitment to your studies have paid off, and you should be proud of your impressive achievements. Your success is a testament to your intelligence, perseverance, and ability to excel in a challenging academic environment. Keep up the great work and continue to strive for excellence in all that you do!  

Workshop on Folk culture

Image
 Workshop on Folk culture Workshop on Folk culture was organised in Bhandarkars'  college in association witj District Janapada  Parishath udupi here on 25th January 2023.  Jayaprakash Hegde, a Chairman of Backward Classes Commission, Karnataka  was inaugurated the programme.  U.S Shenoy, Editor, Kundaprabha Weekly Magazine, kundapura gave a special talk on "Role of Youth in the social  develeoment"  Lion Dr.M.K.Bhat was inaugurated the Variety folk programm.  K.S.Ashok Acharya, Vice President of  District Janapada  Parishath udupi welcomed the gathering .  Raviraj Nayak, Secretory of  District Janapada  Parishath udupi was compered the program. Variety programmes of flok culture showed by Kalamayam Team Udupi. 

ಉಚಿತ ಚರ್ಮದ ಆರೈಕೆ ಚಿಕಿತ್ಸೆ ಮತ್ತು ಔಷಧಿ ವಿತರಣಾ ಶಿಬಿರ

Image
ಉಚಿತ ಚರ್ಮದ ಆರೈಕೆ ಚಿಕಿತ್ಸೆ ಮತ್ತು ಔಷಧಿ ವಿತರಣಾ ಶಿಬಿರ  ಕುಂದಾಪುರ : ಜನೆವರಿ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ. ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಚರ್ಮ ಚಿಕಿತ್ಸಾ ವಿಭಾಗ ಮತ್ತು ಹೆಗ್ಡೆ ಆಂಡ್ ಹೆಗ್ಡೆ ಫಾರ್ಮಾಸ್ಯುಟಿಕಲ್ ಲಿಮಿಟೆಡ್, ಮುಂಬೈ ಇವರ  ಸಹಯೋಗದಲ್ಲಿ "ಉಚಿತ ಚರ್ಮದ ಆರೈಕೆ ಚಿಕಿತ್ಸೆ ಮತ್ತು ಔಷಧಿ ವಿತರಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಚರ್ಮ ಚಿಕಿತ್ಸಾ ವಿಭಾಗದ ವೈದ್ಯರಾದ ಡಾ. ಸತೀಶ್ ಪೈ ಆಗಮಿಸಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ  ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ,  ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ ಸತ್ಯನಾರಾಯಣ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸುರೇಂದ್ರ ಹೆಚ್.ಹೆಚ್. ಉಪಸ್ಥಿತರಿದ್ದರು.  ನಂತರ ಹೆಚ್ಚಿನ ವಿದ್ಯಾರ್ಥಿಗಳು ಈ ಉಚಿತ ಚರ್ಮ ಚಿಕಿತ್ಸಾ ಶಿಬಿರದ ಪ್ರಯೋಜನ ಪಡೆದುಕೊಂಡರು.

ರಕ್ತ ದಾನ ಶಿಬಿರ

Image
 ರಕ್ತ ದಾನ ಶಿಬಿರ ಕುಂದಾಪುರ: ಜನವರಿ 18ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕ, ಕಾಲೇಜಿನ ಯುಥ್ ರೆಡ್ ಕ್ರಾಸ್, ಎನ್.ಎಸ್.ಎಸ್, ಎನ್.ಸಿ.ಸಿ ಮತ್ತು ರೇಂಜರ್ಸ್ ಮತ್ತು ರೋವರ್ಸ್ ಇವರ ಸಂಯುಕ್ತಾಶ್ರಯದಲ್ಲಿ ರಕ್ತ ದಾನ ಶಿಬಿರ ನಡೆಯಿತು.  ಕಾರ್ಯಕ್ರಮವನ್ನು  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಅಧ್ಯಕ್ಷರಾದ ಜಯಕರ ಶೆಟ್ಟಿ ಉದ್ಘಾಟಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಕಾರ್ಯದರ್ಶಿ  ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಂ ಶೆಟ್ಟಿ, ಸದಸ್ಯರಾದ ಡಾ. ಸೋನಿ ಡಿಕೋಸ್ತಾ,  ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ ಜಿ.ಎಂ.ಗೊಂಡ, ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಸತ್ಯನಾರಾಯಣ  ರೇಂಜರ್ಸ್ ಮತ್ತು ರೋವರ್ಸ್ ಇದರ ರಿತಿನ್ ಮತ್ತು ಅಕ್ಷತಾ ಉಪಸ್ಥಿತರಿದ್ದರು.  ಸುಮಾರು 201ಯುನಿಟ್ ರಕ್ತ ಸಂಗ್ರಹಿಸಿ  ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ರಕ್ತ ನಿಧಿ ಕೇಂದ್ರಕ್ಕೆ ನೀಡಲಾಯಿತು.

NATIONAL YOUTH DAY 2023

Image
 NATIONAL YOUTH  DAY 2023 NationalYouth Day was celebrated in the college on 12th January 2023. 

ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ

Image
 ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ ಕುಂದಾಪುರ : ಡಿಸೆಂಬರ್ 29ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ ನಡೆಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್  ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ಶುಭಕರಾಚಾರಿ ವಹಿಸಿದ್ದು ಇವರು ಶಿಬಿರವನ್ನುದ್ದೇಶಿಸಿ ಮಾತನಾಡಿದರು.  ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳು ಆಗಿರುವ ಅರುಣ ಎ. ಎಸ್,ರಾಮಚಂದ್ರ ಆಚಾರ್ ಮತ್ತು ಅಣ್ಣಪ್ಪ ಇವರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರಕಾರ್ಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಂ. ಗೊಂಡ,ಅನೂಪ್ ಕುಮಾರ್ ಶೆಟ್ಟಿ, ಸಮೂಹ ಸಂಪನ್ಮೂಲ ಕೇಂದ್ರ ಹಾಲಾಡಿ, ಜನಾರ್ದನ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಾಲಾಡಿ,ಗುರುಪ್ರಸಾದ್ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ನಾಗರಾಜ್ ಗೋಳಿ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ಗಣೇಶ ಎಮ್ ಅಧ್ಯಕ್ಷರು ಎಸ್ ಡಿ ಎಂ ಸಿ,ಸ.ಹಿ.ಪ್ರಾ.ಶಾಲೆ ಮುದೂರಿ, ಸಂಜೀವ ಮುಖ್ಯೋಪಾಧ್ಯಾಯರು ಸ ಹಿ ಪ್ರಾ ಶಾಲೆ ಮೂದೂರಿ ಮತ್ತು ರಮೇಶ್ ನಾಯ್ಕ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಮುದೂರಿ ...

ಡಿಸೆಂಬರ್ 24 : ವಿದ್ಯಾರ್ಥಿಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ

Image
ಡಿಸೆಂಬರ್ 24 : ವಿದ್ಯಾರ್ಥಿಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ  ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ  ಕುಂದಾಪುರ: ಡಿಸೆಂಬರ್ 24 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸೊಸೈಟಿ (ರಿ), ಬೆಂಗಳೂರು ಇವರಿಂದ 2022-23 ಕಲಿಕಾ ವರ್ಷದ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಆಯ್ಕೆ ಮಾಡಿದ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಮಾನ್ಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಕೂಲ್ ಆಫ್ ಮೆಡಿಸಿನ್, ಟೆಕ್ಸಾಸ್ ಎ&ಎಂ ಯೂನಿವರ್ಸಿಟಿ, ಯು.ಎಸ್.ಎ. ಇಲ್ಲಿನ  ಪ್ರೊ. ಅಶೋಕ್ ಕೆ.ಶೆಟ್ಟಿ   ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ವಹಿಸಲಿದ್ದಾರೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಸೊಸೈಟಿ (ರಿ), ಬೆಂಗಳೂರು ಇದರ ಪ್ರಕಟಣೆ ತಿಳಿಸಿದೆ.

23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23

23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ  ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23 ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿ ಎಂಬಲ್ಲಿ ನಡೆಯಲಿದೆ.  ಡಿಸೆಂಬರ್ 23ರಂದು ಶಿಬಿರದ ಉದ್ಘಾಟನಾ ನಡೆಯಲಿದೆ. ಶಿಬಿರವನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರು ಕುಂದಾಪುರ ಕ್ಷೇತ್ರ ಇವರು ಉದ್ಘಾಟಿಸಲಿದ್ದಾರೆ.  25ರಂದು ಕಸ್ತೂರಬಾ ಆಸ್ಪತ್ರೆ ಮಣಿಪಾಲ  ಮತ್ತು  ಹಾಲಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು  ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ  ಗ್ರಾಮಸ್ಥರಿಗೆ ನುರಿತ ವೈದ್ಯರಿಂದ ಬ್ರಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 24,26,26,27,28ರಂದು ವಿವಿಧ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 29ರಂದು ಶಿಬಿರ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ

Image
  ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ  ಕುಂದಾಪುರ: ಡಿಸೆಂಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ  ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಎಜುಕೇಶನ್ ಇದರ ಸಾಂಸ್ಕೃತಿಕ ಸಹಕಾರ ಸಮಿತಿಯ  ಸಹಯೋಗದಲ್ಲಿ ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.  ರಾಷ್ಟ್ರೀಯ ಕಥಕ್ ನೃತ್ಯ ಕಲಾವಿದ ಪಂಡಿತ್ ರಾಜೇಂದ್ರ ಗಂಗಾನಿ ಅವರು ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಜನಮನ ಸೆಳೆಯಿತು. ಮೋಹಿತ್ ಗಂಗಾನಿಯವರು ತಬಲಾ, ವಿನೋದ್ ಕುಮಾರ್ ಅವರು ಹಾಡುಗಾರಿಕೆ ಮತ್ತು ಹಾರ್ಮೋನಿಯಂ, ಕಿಶೋರ್ ಕುಮಾರ್ ಮೃದಂಗ ಮತ್ತು ರವಿಶಂಕರ್ ಶರ್ಮಾ ಅವರು ಸಿತಾರ್ ವಾದನದಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ , ಕಲಾ ಸಂಘದ ಸಂಯೋಜಕರಾದ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕಿ  ಸುಮಾ ಸ್ವಾಗತಿಸಿ ವಂದಿಸಿದರು.