BCK: Drug Awareness Program
ಕುಂದಾಪುರ: ಫೆಬ್ರವರಿ 28ರಂದು ಇಲ್ಲಿನ
ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ
ಘಟಕ, ರೆಡ್ ಕ್ರಾಸ್
ಘಟಕ, ಮತ್ತು ಜೆ.ಸಿ.ಐ
ಕುಂದಾಪುರ ಸಿಟಿ ಇವರ
ಸಹಯೋಗದಲ್ಲಿ ಕ್ಯಾನ್ಸರ್ ಕುರಿತು
ಜಾಗೃತಿ ಮತ್ತು ಮಾದಕ
ವಸ್ತುಗಳ ವ್ಯಸನದ ದುಷ್ಪರಿಣಾಮಗಳು ಎಂಬ ವಿಶೇಷ ಕಾರ್ಯಕ್ರಮ
ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಕೊಲ್ಲೂರು ಪೊಲೀಸ್ ಠಾಣೆಯ
ಸಬ್ಇನ್ಸ್ಪೆಕ್ಟರ್ ಜಯಶ್ರೀ
ಅವರು ಮಾದಕವಸ್ತು ವ್ಯಸನದ
ದುಷ್ಪರಿಣಾಮಗಳ ಕುರಿತು ಮಾಹಿತಿ
ನೀಡಿದರು. ಜೊತೆಗೆ ಪೌಷ್ಟಿಕ
ಆಹಾರಗಳು ನಮಗೆ ಒಳ್ಳೆಯ ಆರೋಗ್ಯವನ್ನು ಚೆನ್ನಾಗಿ
ಇರಿಸಲು ಸಹಕರಿಸುತ್ತದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಕ್ಯಪಂಕ್ಚರ್ ತಜ್ಞ
ವೈದ್ಯ ಡಾ.ಎಸ್
ಭಾಸ್ಕರ್ ಕಾರ್ಣಿಕ್ ಮಾತನಾಡಿ
ಕ್ಯಾನ್ಸರ್ ಕುರಿತು ಮಾಹಿತಿ
ಮತ್ತು ಬರದಂತೆ ತಡೆಯು
ಮಾರ್ಗಗಳು ಮತ್ತು ಜಾಗೃತಿ
ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ, ಡಾ.ವೀಣಾ, ತಾಲೂಕು ಆರೋಗ್ಯ
ಇಲಾಖೆ ಕುಂದಾಪುರ, ಕುಂದಾಪುರ ತಾಲೂಕು
ಜೆ.ಸಿ. ಐ ಅಧ್ಯಕ್ಷೆ
ರೇಷ್ಮಾ ಕೋಟ್ಯಾನ್, ಡಾ.ಸೋನಿ
ಡಿಕೊಸ್ತಾ, ಜೆ.ಸಿ.ಐ
ಕುಂದಾಪುರ ಸಿಟಿ, ಹುಸೇನ್ ಹೈಕಾಡಿ,
ಮಾಜಿ ಅಧ್ಯಕ್ಷ, ಜೆಸಿಐ ಕುಂದಾಪುರ,
ಕಾಲೇಜಿನ ರಾಷ್ಟ್ರೀಯ ಸೇವಾ
ಯೋಜನೆ ಘಟಕದ ಯೋಜನಾಧಿಕಾರಿ ಅರುಣ್.ಎ.ಎಸ್
ರೆಡ್ ಕ್ರಾಸ್ ಘಟಕದ
ವಿದ್ಯಾರ್ಥಿ ಉಪಸ್ಥಿತರಿದ್ದರು.
Comments
Post a Comment