ಭಂಡಾರ್ಕಾರ್ಸ್: ಡಾ.ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಸನ್ಮಾನ
ಕುಂದಾಪುರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ
ಇದರ 23ನೇ ಘಟಿಕೋತ್ಸವ
ಕಾರ್ಯಕ್ರಮದಲ್ಲಿ "ಡಾಕ್ಟರ್ ಆಫ್
ಸೈನ್ಸ್" ಗೌರವಕ್ಕೆ ಭಾಜನರಾದ ಸಾಧಕ,
ದಾನಿ, ಪ್ರಾಕ್ತನ ವಿದ್ಯಾರ್ಥಿ ಡಾ.ಹಾಲಾಡಿ ಶ್ರೀನಿವಾಸ
ಶೆಟ್ಟಿಯವರಿಗೆ ಸನ್ಮಾನ ಸಮಾರಂಭ
ಮತ್ತು ಹೆಗ್ಗುಂಜೆ ರಾಜೀವ
ಶೆಟ್ಟಿ ಚಾರಿಟೇಬಲ್ ಸೊಸೈಟಿ,
ಬೆಂಗಳೂರು ವತಿಯಿಂದ 2023-24ನೇ ಸಾಲಿನ
ಆಯ್ದ 200 ವಿದ್ಯಾರ್ಥಿವೇತನ ವಿತರಣಾ
ಕಾರ್ಯಕ್ರಮ ಡಿಸೆಂಬರ್ 8ರಂದು ನಡೆಯಲಿದೆ.
ಅಕಾಡೆಮಿ
ಆಫ್ ಜನರಲ್ ಎಜುಕೇಶನ್
ಮಣಿಪಾಲ ಇದರ ಅಧ್ಯಕ್ಷರಾದ ಡಾ.ಹೆಚ್.ಎಸ್.ಬಲ್ಲಾಳ್ ಅವರು ಸಾಧಕರಿಗೆ
ಸನ್ಮಾನ ಪ್ರದಾನ ಮಾಡಲಿದ್ದಾರೆ.
ಕುಂದಾಪುರ
ವಿಧಾನಸಭಾ ಕ್ಷೇತ್ರದ ಶಾಸಕ
ಕಿರಣ್ ಕುಮಾರ್ ಕೊಡ್ಗಿ,
ಬೈಂದೂರು ವಿಧಾನಸಭಾ ಕ್ಷೇತ್ರದ
ಶಾಸಕ ಗುರುರಾಜ್ ಗಂಟಿಹೊಳೆ
ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ
ಹಿರಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು ವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments
Post a Comment