BCK: Flute Programme
ಭಂಡಾರ್ಕಾರ್ಸ್: ಪ್ರವೀಣ್ ಗೋಡ್ಕಿಂಡಿ ಕೊಳಲು ವಾದನ
ಕುಂದಾಪುರ: ನವೆಂಬರ್ 23 ರಂದು ಇಲ್ಲಿನ ಭಂಡಾರ್ಕಾರ್ಸ ಕಾಲೇಜಿನಲ್ಲಿ ಸ್ಪಿಕ್ ಮೆಕೆ (ಸೊಸೈಟಿ ಫಾರ್ ದ ಪ್ರಮೋಶನ್ ಆಫ್ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಅಂಡ್ ಕಲ್ಚರ್ ಅಮಾಂಗಸ್ಟ್ ಯೂಥ್) ಆಶ್ರಯದಲ್ಲಿ ಖ್ಯಾತ ಶಾಸ್ತ್ರೀಯ ಹಿಂದುಸ್ತಾನಿ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಅವರಿಂದ ಕೊಳಲು ವಾದನ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿದೆ.
ಈ ಸಂದರ್ಭದಲ್ಲಿ ಕೊಳಲು ವಾದಕ ಪ್ರವೀಣ ಗೋಡ್ಕಿಂಡಿ ಮತ್ತು ತಬಲಾ ವಾದಕ ರವೀಂದ್ರ ಯಾವಗಲ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು, ದೇವದಾಸ್ ಕಾಮತ್, ಪ್ರಜ್ಞೇಶ್ ಪ್ರಭು, ಯು.ಎಸ್.ಶೆಣೈ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು.
ಕೊಳಲು ವಾದಕ ಪ್ರವೀಣ್
ಗೋಡ್ಕಿಂಡಿ ಅವರು ತಮ್ಮ
ಕೊಳಲು ವಾದನ ಕಾರ್ಯಕ್ರಮ
ನೆರೆದ ವಿದ್ಯಾರ್ಥಿಗಳನ್ನು ಮತ್ತು ಸಭಿಕರ
ಮನಸೋರೆಗೊಳಿಸುವಲ್ಲಿ ಯಶಸ್ವಿಯಾಯಿತು. ಅಂತಹ ಅಭೂತಪೂರ್ವ
ಶಕ್ತಿ ಅವರು ಕೊಳಲು
ವಾದನದಲ್ಲಿತ್ತು. ಅದಕ್ಕೆ ತಕ್ಕಂತೆ
ತಬಲಾದಲ್ಲಿ ರವೀಂದ್ರ
ಯಾವಗಲ್ ಸಾಥ್ ನೀಡಿದರು.
ಇಂಗ್ಲಿಷ್ ವಿಭಾಗದ ಉಪನ್ಯಾಸಕಿ
ಶೈಲಿ ಆರ್. ಕಾರ್ಯಕ್ರಮ ನಿರೂಪಿಸಿದರು. ಶಶಾಂಕ್ ಪಟೇಲ್ ವಂದಿಸಿದರು.
Comments
Post a Comment