ಭಂಡಾರ್ಕಾರ್ಸ್: ರಕ್ಷಕ- ಶಿಕ್ಷಕರ ಸಂಘದ
ಸಭೆ
ಕುಂದಾಪುರ: ನವೆಂಬರ್ 18ರಂದು ಇಲ್ಲಿನ
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಕ್ಷಕ
- ಶಿಕ್ಷಕರ ಸಭೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ವಿಶ್ವಸ್ಥ
ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ
ಮಾತನಾಡಿ ವ್ಯಕ್ತಿತ್ವ ವಿಕಸನಕ್ಕೆ ಕಾಲೇಜು
ವೇದಿಕೆಯಾಗಿದೆ. ಇಲ್ಲಿ ಅಭ್ಯಸಿಸಿದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪಾಲಕರು ಪೋಷಕರು ನಿಮ್ಮ
ಮಕ್ಕಳು ಅಂತಹ ಸಾಧನೆ
ಮಾಡುವಂತೆ ಪ್ರೇರೇಪಿಸಬೇಕು. ಅಧ್ಯಯನ ಸಮಯದಲ್ಲಿ ಒದಗಿ
ಬರುವ ಅವಕಾಶಗಳನ್ನು ಸದುಪಯೋಗ
ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಕ್ಷಕ-
ಶಿಕ್ಷಕರ ಸಂಘದ ನೂತನ
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ
ನಡೆಯಿತು. ಅಧ್ಯಕ್ಷರಾಗಿ ಎಸ್.ಎನ್. ಸದಾನಂದ ಕಾಮತ್,
ಉಪಾಧ್ಯಕ್ಷರಾಗಿ ವಿದ್ಯಾ ತೆಕ್ಕಟ್ಟೆ,
ಕಾರ್ಯದರ್ಶಿಯಾಗಿ ಸಂಜೀವ ತೆಕ್ಕಟ್ಟೆ,
ಖಜಾಂಚಿಯಾಗಿ ಕಾಲೇಜಿನ ಇಂಗ್ಲಿಷ್
ವಿಭಾಗದ ಉಪನ್ಯಾಸಕ ಪ್ರವೀಣ್,
ಸದಸ್ಯರಾಗಿ ಬಬಿತಾ, ಶೋಭಾ, ಸುಷ್ಮಾ, ಗೀತಾ, ಶಾರದಾ ಕೆರೂರು,
ಎಸ್.ಕೆ.ಪೂಜಾರಿ,
ಶ್ರೀಮತಿ, ಸರೋಜಾ ಅಮೀನ್,
ನಾಗೇಶ್ ಮತ್ತು ನಿರಂಜನ
ಅವರು ಆಯ್ಕೆಯಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ
ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ
ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಉಪಸ್ಥಿತರಿದ್ದರು.
ಇತಿಹಾಸ ವಿಭಾಗದ ಉಪನ್ಯಾಸಕಿ
ಸ್ನೇಹಾ ಎಸ್. ಕಾರ್ಯಕ್ರಮ ನಿರೂಪಿಸಿದರು.
Comments
Post a Comment