
ಭಂಡಾರ್ಕಾರ್ಸ್ : ರೇಡಿಯೋ ಕುಂದಾಪ್ರ 89.6 FM ಸಮುದಾಯ ಬಾನುಲಿ ಕೇಂದ್ರದ ಲಾಂಛನ ಮತ್ತು ರಾಗ ಬಿಡುಗಡೆ ಕುಂದಾಪುರ : ನಿಮ್ಮ ಒಳಗೊಂದು ಕಿಚ್ಚು ಹುಟ್ಟಬೇಕು . ನಮ್ಮವರೇ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹ ನೀಡಿದಾಗ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ . ಕುಂದಾಪುರ ಪರಿಸರ ಭಾಗದಲ್ಲಿ ಹಲವರು ಕಲೆಗಳಿವೆ ಅವುಗಳಿಗೆ ಇದರ ಉಪಯೋಗವಾಗಲಿ ಇವತ್ತಿನ ವರೆಗಿನ ಹಾದಿಯ ನನ್ನ ದುಡಿಮೆಯ 20 ಶೇಕಡಾ ಮಾತ್ರ ನನಗಾಗಿ ಉಳಿದ 80 ಶೇಕಡಾ ಸಮಾಜಕ್ಕಾಗಿ ಎಂಬ ಪಾಲಿಸಿ ಹಾಕಿಕೊಂಡು ಬರುತ್ತಿದ್ದೇನೆ . ರೇಡಿಯೋ ಎನ್ನುವುದು ಮೊಬೈಲ್ ಅಥವಾ ಉಳಿದ ಮಾಧ್ಯಮಗಳಿಗಿಂತ ಭಿನ್ನ . ಇದರ ಹಿಂದಿನ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು . ...