ರಕ್ತದಾನ ಜೀವದಾನ : ಎಸ್. ಜಯಕರ್ ಶೆಟ್ಟಿ,
ರಕ್ತದಾನ ಜೀವದಾನ : ಎಸ್. ಜಯಕರ್ ಶೆಟ್ಟಿ
ಕುಂದಾಪುರ : "ರಕ್ತದಾನವೆಂದರೆ ಜೀವದಾನ ಮಾಡಿದ ಹಾಗೆ... ಬೇರೆಲ್ಲಾ ದಾನಕ್ಕಿಂತ ಶ್ರೇಷ್ಠವಾದ ದಾನವೆಂದರೆ ಅದು ರಕ್ತದಾನ "ಎಂದು ಎಸ್. ಜಯಕರ್ ಶೆಟ್ಟಿ, ಸಭಾಪತಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರು ಹೇಳಿದರು.ಅವರು ಇಲ್ಲಿನ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಶಾಖೆ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಭಾಗವಹಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮುಂದೆ ಬಂದು ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ರಕ್ತದಾನದ ಮಹತ್ವವನ್ನು ಅರಿಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕಾಲೇಜಿನ ರೆಡ್ ಕ್ರಾಸ್ ಸಂಘಟಿಗರನ್ನು ಮತ್ತು ಹತ್ತು ಹಲವು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳ್ಳನ್ನ ಸನ್ಮಾನಿಸಲಾಯಿತು.
ಎನ್ ಪಿ ನಾರಾಯಣ್ ಶೆಟ್ಟಿ, ಪದವಿ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಶುಭಕರ ಆಚಾರಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಭಂಡಾರಕಾರ್ಸ್ ಕಾಲೇಜು ಕುಂದಾಪುರ, ಶಿವರಾಮ ಶೆಟ್ಟಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಸತ್ಯನಾರಾಯಣ ಕಾರ್ಯಕ್ರಮ ಸಂಯೋಜಕರು, ರೆಡ್ ಕ್ರಾಸ್ ಸಂಘಟಿಗರು ಭಂಡಾರಕಾರ್ಸ್ ಕಾಲೇಜು ಕುಂದಾಪುರ, ವಿದ್ಯಾರಾಣಿ ರೆಡ್ ಕ್ರಾಸ್ ಸಂಘಟಿಕರು ಭಂಡಾರಕಾರ್ಸ್ ಕಾಲೇಜು ಕುಂದಾಪುರ, ಉಪಸ್ಥಿತರಿದ್ದರು.
ಡಾ ಉಮೇಶ್ ಪುತ್ರನ್ ಉಪಸಭಾಪತಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಸ್ವಾಗತಿಸಿ, ಡಾ. ಸೋನಿ ಡಿಸೋಜ ನಿರೂಪಿಸಿ, , ಸೀತಾರಾಮ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.
Comments
Post a Comment