Posts

Showing posts from July, 2022

Sports News

Image
 

ವಿಶ್ವ ವಿದ್ಯಾಲಯ ಮಟ್ಟದ ದೇಶ ಭಕ್ತಿಗೀತೆ ಸ್ಪರ್ಧೆ ಮತ್ತು ಸ್ವಾತಂತ್ರ್ಯದ ಓಟ ಸ್ಪರ್ಧೆ

Image
 

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ "ಯುವಜನತೆಯಲ್ಲಿ ಮಾನಸಿಕ ಸ್ವಾಸ್ಥ್ಯ" ಎಂಬ ವಿಷಯದ ಕುರಿತು ಉಪನ್ಯಾಸ

Image
  ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ಆಶ್ರಯದಲ್ಲಿ  ಆಯೋಜಿಸಿದ್ದ "ಯುವಜನತೆಯಲ್ಲಿ ಮಾನಸಿಕ ಸ್ವಾಸ್ಥ್ಯ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಉಡುಪಿಯ ಡಾ.ಎ.ವಿ.ಬಾಳಿಗ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಇಂದಿನ ಯುವಜನತೆಯು ಈಗಿನ  ಜೀವನಶೈಲಿಯಿಂದಾಗಿ ಬೇಗ ಒತ್ತಡಗಳಿಗೆ ಒಳಗಾಗುತ್ತಾರೆ. ಯುವಜನತೆ ಒತ್ತಡ ನಿರ್ವಹಣೆಯ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ನಿಶಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಕಾವ್ಯ ಹೆಚ್. ಸ್ವಾಗತಿಸಿ, ಅಂಜನಾದೇವಿ ಕಾರ್ಯಕ್ರಮ ನಿರ್ವಹಿಸಿ, ನೀಲಾ ಪರಿಚಯಿಸಿ, ಶೃತಿ ವಂದಿಸಿದರು.

ಪ್ಲಾಸ್ಟಿಕ್ ಮತ್ತು ತ್ಯಾಜ್ಯ ನಿರ್ವಹಣೆ ಮಾಹಿತಿ ಕಾರ್ಯಾಗಾರ

Image
  ಕುಂದಾಪುರ : "ಅತಿಯಾದ ಬೆಳವಣಿಗೆ ನಮ್ಮ ಹಿರಿಯರ ಅಥವಾ ಪೂರ್ವಿಕರು ಬೆಳೆಸಿದ ಪರಿಸರವನ್ನ ನಾವು ಹಾಳು ಮಾಡುತ್ತಿದ್ದೇವೆ. ಈ ಪರಿಸರವನ್ನು ಹಾಳು ಮಾಡಲು ನಮಗೆ ಯಾವುದೇ ಹಕ್ಕಿಲ್ಲಾ " ಎಂದು ಗುರುಪ್ರಸಾದ್ ಶೆಟ್ಟಿ ಪರಿಸರ ಅಭಿಯುತರರು ಪುರಸಭೆ ಕುಂದಾಪುರ ಇವರು ಹೇಳಿದರು. ಅವರು ಇತ್ತೀಚಿಗೆ ಇಲ್ಲಿನ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪುರಸಭೆ ಕುಂದಾಪುರ ಇವರ ಸಹಯೋಗದಲ್ಲಿ ನಡೆದ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ನಿರ್ವಹಣೆ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.          ಮಾನವನು ತನ್ನ ದೈನಂದಿನ ಬದುಕಿನಲ್ಲಿ ತಾನು ಬಳಸಿ ಎಸೆಯುವ ವಸ್ತುಗಳನ್ನ ಕ್ರಮಬದ್ಧವಾಗಿ ಸಂಗ್ರಹಣೆ ಮಾಡಿ ಸಂಸ್ಕರಣೆ,ಮರುಬಳಕೆ ಹಾಗೂ ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ವಿವರಿಸಿದ್ದರು.          ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎನ್. ಪಿ. ನಾರಾಯಣ್ ಶೆಟ್ಟಿ ಪ್ರಾಂಶುಪಾಲರು, ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ವಹಿಸಿದರು.          ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗೋಪಾಲ್ ಕೃಷ್ಣ ಶೆಟ್ಟಿ ಮುಖ್ಯ ಅಧಿಕಾರಿ ಪುರಸಭೆ ಕುಂದಾಪುರ ಮತ್ತು ರಾಮಚಂದ್ರ ಆಚಾರಿ ಎನ್.ಎಸ್.ಎಸ್ ಯೋಜನಾಧಿಕಾರಿ ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ಉಪಸ್ಥಿತರಿದ್ದರು          200ಕ್ಕ...

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಟೆಬಲ್ ಟೆನಿಸ್ ಟೂರ್ನಾಮೆಂಟ್.

Image
  ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಟೆಬಲ್  ಟೆನಿಸ್ ಟೂರ್ನಾಮೆಂಟ್ ನಡೆಯಿತು.  ಅಂತಿಮ ಪಂದ್ಯದಲ್ಲಿ ಹುಡುಗರು ವಿಭಾಗದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೊದಲ ಸ್ಥಾನ ಪಡೆದು ಚಾಂಪಿಯನ್ ತಂಡವಾಯಿತು. ಮಡಿಕೇರಿಯ ಎಫ್.ಎಂ.ಕೆ.ಎಂ.ಸಿ ಕಾಲೇಜು ರನ್ನರ್ ಅಫ್ ಆಗಿ ದ್ವಿತೀಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು ಪುತ್ತೂರಿನ ವಿವೇಕಾನಂದ ಕಾಲೇಜು ಪಡೆಯಿತು. ಹುಡುಗಿಯರ ವಿಭಾಗದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಶಿಪ್ ಪಡೆಯಿತು. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ರನ್ನರ್ ಅಫ್ ಆಗಿ ದ್ವಿತೀಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು ಎಸ್.ಡಿ.ಎಂ ಕಾಲೇಜು ಉಜಿರೆ ಪಡೆಯಿತು. ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ  ನಿತೀಶ್ ಸುವರ್ಣ ಮತ್ತು ಉಡುಪಿಯ ಪೂರ್ಣಪ್ರಜ್ಞ ಕಾಲೇಜು ತಂಡದ ಭೂಮಿಕಾ ಪೂಜಾರಿ   ಟೂರ್ನಾಮೆಂಟ್ ನ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು. ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ದೋಮ ಚಂದ್ರಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಶಾಂತಾರಾಮ್ ಪ್ರಭು ವಹಿಸಿದ್ದರು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಟಿ.ಪ್ರಕಾಶ್ ಸೋನ್ಸ್, ಮಂ...

Industrial visit by the students of department of Chemistry.

Image
 

Mangalore University Inter-collegiate Table Tennis Tournament

Image
 Prof. Doma ChandraShekar ex. Principal of Bhandarkars' college Kundapura was inaugurating Mangalore University Inter-collegiate Table Tennis tournament held at our college on 19-20 of July.     

ಕನ್ನಡ ವಿಭಾಗದ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ "ಮೌಲ್ಯಾಧಾರಿತ ಶಿಕ್ಷಣ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

Image
  ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ "ಮೌಲ್ಯಾಧಾರಿತ ಶಿಕ್ಷಣ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಧ್ಯಾಪಕ ಚೇತನ್ ಕುಮಾರ್ ಅವರು  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ವಿದ್ಯಾರ್ಥಿಗಳು ಕಾಲದ ಬದಲಾವಣೆಗಳ ಜೊತೆಗೆ ಹೆಜ್ಜೆ ಹಾಕುವಾಗ ಸಮಯಪ್ರಜ್ಞೆ  ಅತಿಮುಖ್ಯ. ಬದುಕಿನಲ್ಲಿ ಯಶಸ್ಸು ಎನ್ನುವುದು ಕಂಡಕಂಡಲ್ಲಿ ಬೆಳೆಯುವುದಿಲ್ಲ. ಯಶಸ್ಸು ಪವಿತ್ರ ಹೃದಯದ ಮಂದಾರ ಪುಷ್ಪ ವಾಗಿದೆ.  ಈ ಯಶಸ್ಸನ್ನು ಪಡೆಯುವಾಗ ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ. ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಪ್ರಯತ್ನ ಪಡಬೇಕು. ಹಾಗೇ ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಏಕೆಂದರೆ ಎಷ್ಟೋ ವಿದ್ಯಾರ್ಥಿಗಳು ತನ್ನ ಶೈಕ್ಷಣಿಕ ಹಂತದಲ್ಲಿ ಶಿಕ್ಷಕರು ಹಾಕಿಕೊಟ್ಟ ಉತ್ತಮ ಮಾರ್ಗದಲ್ಲಿಯೇ ನಡೆದು ಯಶಸ್ಸನ್ನು ಪಡೆಯುತ್ತಾರೆ ಎಂದು ಅಭಿಪ್ರಾಯಪಟ್ಟರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಲಲಿತಾದೇವಿ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಮೈತ್ರಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸೌಮ್ಯ ಕಾರ್ಯಕ್ರಮ ನಿರ್ವಹಿಸಿ, ಚಂದ್ರಿಕಾ ಪರಿಚಯಿಸಿ ಪ್ರಿಯಾಂಕಾ ವಂದಿಸಿದರು.

ಸ್ವಯಂ ಪ್ರತಿಫಲನ ಕಾರ್ಯಗಾರ

Image
 ಸ್ವಯಂ ಪ್ರತಿಫಲನ  ಕಾರ್ಯಗಾರ :   ನಮ್ಮೊಳಗಿನ ಶಕ್ತಿಯನ್ನು ಅರಿಯುವ ತನಕ ನಿಜಕ್ಕೂ ಸಾಧಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ನಾವೇನೆಂದು ನಮ್ಮ ಶಕ್ತಿ ಏನೆಂದು ಅರಿತರೆ ನಮ್ಮ ಗುರಿಯನ್ನು ತಲುಪಬಹುದು ಎಂದು ಮಂಗಳೂರು ಇಲ್ಲಿನ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಸಚಿತ ನಂದಗೋಪಾಲ್ ಹೇಳಿದರು ಅವರು ಜುಲೈ,15 ರಂದು ಭಂಡರ್ಕಾರ್ಸ್ ಕಾಲೇಜಿನಲ್ಲಿ  ಐಚ್ಛಿಕ ಭಾಷೆ ಇಂಗ್ಲಿಷ್ ಪತ್ರಿಕೋದ್ಯಮ ಮನಶಾಸ್ತ್ರ ವಿಭಾಗಗಳು ಸೇರಿ ಆಯೋಜಿಸಿದ್ದ "ಸ್ವಯಂ ಪ್ರತಿಫಲನ"  ಎಂಬ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು . ಜೀವನದಲ್ಲಿ ಅನೇಕ ಬಾರಿ ಸೋಲು ಗೆಲುವು ಎಲ್ಲವನ್ನು ಎದುರಿಸುತ್ತೇವೆ ಆದರೆ ಹೇಗೆ ಎದುರಿಸಬೇಕೆಂಬುದನ್ನು ಮೊದಲು ಅರಿತಿರಬೇಕು ಇಲ್ಲವಾದಲ್ಲಿ ಬದುಕನ್ನು ಗೆಲುವಿನ ಹಂತಕ್ಕೆ ಸಾಗಿಸುವುದು ಕಷ್ಟವಾಗುತ್ತದೆ ಹಾಗಾಗಿ ಸೋಲನ್ನು ಎದೆಗುಂದದೆ ಸ್ವೀಕರಿಸಬೇಕು ಎಂದರು. ಕಾಲೇಜಿನ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿದ್ದ ಅವರು ಅವರದೇ ಜೀವನದ ಘಟನೆಯನ್ನು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿದ್ಯಾರ್ಥಿಗಳು ಸದಾ ಲವಲವಿಕೆಯಿಂದ ಬದುಕಿನ ಪ್ರತಿ ಕ್ಷಣವನ್ನು ಅನುಭವಿಸಬೇಕು ಆಗ ಮಾತ್ರ ಜೀವನಕ್ಕೆ ಅರ್ಥ ಲಭಿಸುತ್ತದೆ ಎಂದರು. ನೃತ್ಯ ಚಿಕಿತ್ಸಕ  ಮತ್ತು ಚಲನವಲನ  ವಿಧಾನಗಳ  ಮೂಲಕ ಮತ್ತು ಚಿತ್ರಕಲೆ ಮುಂತಾದ ಭಿನ್ನ ಚಟುವ...

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೆಡ ಕ್ರಾಸ್ ಘಟಕದ ವತಿಯಿಂದ " ಯಶಸ್ಸಿನಲ್ಲಿ ಗುರುವಿನ ಪಾತ್ರ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ

Image
 ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೆಡ ಕ್ರಾಸ್  ಘಟಕದ ವತಿಯಿಂದ " ಯಶಸ್ಸಿನಲ್ಲಿ ಗುರುವಿನ ಪಾತ್ರ" ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬೈಯ ಇಸ್ಕಾನ್ ಸಂಸ್ಥೆಯ  ಲೋಕಭವನ ಮಾತಾಜಿ ಆಗಮಿಸಿ ವ್ಯಕ್ತಿಯ ಜೀವನದಲ್ಲಿ ಒಬ್ಬ ಗುರುವಿನ ಪಾತ್ರ ಯಾವ ರೀತಿಯಲ್ಲಿ ಬಹುಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ  ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ  ಭಜನಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ.ಸತ್ಯನಾರಾಯಣ ಸ್ವಾಗತಿಸಿದರು.ಕಾಲೇಜಿನ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಾಕಾರಿಣಿ ವಿದ್ಯಾರಾಣಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.