BCK: College Day
ವಿದ್ಯೆಯಿಂದ ಅಮೃತತ್ವವನ್ನು ಹೊಂದಬಹುದು : ಎಸ್ . ಎಸ್ . ನಾಯಕ್ ಕುಂದಾಪುರ : ವಿದ್ಯೆಯಿಂದ ಅಮೃತತ್ವವನ್ನು ಹೊಂದಬಹುದು ಎಂದು ಎಸ್ . ಎಸ್ . ನಾಯಕ್ ಮತ್ತು ಅಸೋಸಿಯೇಟ್ಸ್ ಎಂಬ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಹಿರಿಯ ಪಾಲುದಾರರಾದ ಎಸ್ . ಎಸ್ . ನಾ ಯಕ್ ಹೇಳಿದರು . ಅವರು ಮಾರ್ಚ್ 27 ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು . ವಿದ್ಯಾ ಎಲ್ಲಾ ಸಂಪತ್ತಿಗಿಂತ ಶ್ರೇಷ್ಠವಾದುದು . ಅದನ್ನು ಯಾರು ಕಳ್ಳತನ ಮಾಡಲಾಗುವುದಿಲ್ಲ . ಕಸಿಯಲು ಸಾಧ್ಯವಿಲ್ಲ . ದುಡ್ಡಿನಂತೆ ಖರ್ಚು ಮಾಡಲು ಆಗುವುದಿಲ್ಲ . ಅದನ್ನು ಹೊರಲು ಯಾವುದೇ ಭಾರಿ ವಾಹನಗಳು ಬೇಡ . ವಿದ್ಯೆ ಧನಕ್ಕಿಂತ ಶ್ರೇಷ್ಠವಾದುದು . ಇಂತಹ ಶ್ರೇಷ್ಠ ವಿದ್ಯಾ ಸಂಪತ್ತನ್ನು ಪಡೆಯಬೇಕಾದರೆ ಇಚ್ಛಾಶಕ್ತಿ ಮತ್ತು ಪ್ರಯತ್ನ ಬೇಕು . ಜೊತೆಗೆ ಅತ್ಯುತ್ತ...