Posts

Showing posts from May, 2023

ಅಗ್ನಿ ಸುರಕ್ಷತೆ ಅರಿವು ಕಾರ್ಯಕ್ರಮ

Image
 ಅಗ್ನಿ ಸುರಕ್ಷತೆ  ಅರಿವು ಕಾರ್ಯಕ್ರಮ ಕುಂದಾಪುರ, ಮೇ 24: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಇಲ್ಲಿನ ಐಕ್ಯೂಎಸಿ,  ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ, ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಶಾಖೆ ಅವರ ಸಹಯೋಗದಲ್ಲಿ ಅಗ್ನಿ ಸುರಕ್ಷತೆ  ಅರಿವು ಕಾರ್ಯಕ್ರಮ ನಡೆಯಿತು. ಭಾಲಕೃಷ್ಣ ,ಅಧಿಕಾರಿಗಳು ಅಗ್ನಿಶಾಮಕ ಇಲಾಖೆ ಕೋಣಿ ಕುಂದಾಪುರ,  ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಅಗ್ನಿ ಸುರಕ್ಷತೆಯ ಕುರಿತು ಅರಿವು ಮೂಡಿಸಿದರು. ಡಾ. ಎನ್.ಪಿ ನಾರಾಯಣ್ ಶೆಟ್ಟಿ ಪದವಿ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.   ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಗ್ನಿಶಾಮಕ ಇಲಾಖೆ ಕೋಣಿ, ಕುಂದಾಪುರ ಇಲ್ಲಿನ ಅಧಿಕಾರಿಗಳಾದ ಕೃಷ್ಣನಂದಾ. ಟಿ. ಗೌಡ  ಎಸ್. ಜಯಕರ್ ಶೆಟ್ಟಿ ಅಧ್ಯಕ್ಷರು ಐಆರ್ ಸಿ ಎಸ್ ಕುಂದಾಪುರ ತಾಲೂಕು ಶಾಖೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರ ಆಚಾರಿ ,ಐಕ್ಯೂಎಸಿ ಸಂಯೋಜಕರಾದ ಡಾ. ಕೆ. ಎಮ್. ವಿಜಯ್ ಕುಮಾರ್ , ಕಾಲೇಜಿನ ರೆಡ್ ಕ್ರಾಸ್ ಘಟಕದ  ಪ್ರೊ.ಸತ್ಯನಾರಾಯಣ ಕಾರ್ಯಕ್ರಮ ಸಂಯೋಜಕರು, ಎನ್ಎಸ್ಎಸ್ ಯೋಜನಾಧಿಕಾರಿ ರಾಮಚಂದ್ರ ಆಚಾರ್  ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅರ್ಪಿತಾ ಸ್ವಾಗತಸಿ, ವಿದ್ಯಾರ್ಥಿನಿ ಸೊನಲಿ ನಿರೂಪಿಸಿ ಮತ್ತು...

ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ

Image
ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ   ಕುಂದಾಪುರ:ದಿನಾಂಕ 19-05-2023 ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ  ನಡೆಯಿತು. ಕಾರ್ಯಕ್ರಮವನ್ನು ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಮಕೃಷ್ಣ ಭಟ್  ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಅರುಣ್ ಎ ಎಸ್,  ರಾಮಚಂದ್ರ ಆಚಾರ್, ಅಣ್ಣಪ್ಪ ಪೂಜಾರಿ ಹಾಗೂ ಉಪನ್ಯಾಸಕರಾದ  ಗಿರಿರಾಜ್ ಭಟ್ ಉಪಸ್ಥಿತರಿದ್ದರು. 90 ವಿದ್ಯಾರ್ಥಿಗಳು ಒಂದು ದಿನದ ಈ ಶಿಬಿರದಲ್ಲಿ ಭಾಗವಹಿಸಿ ದೇವಸ್ಥಾನದ ಪರಿಸರವನ್ನು ಸ್ವಚ್ಛ ಗೊಳಿಸಿ, ಕೆರೆಯ ಹೂಳೆತ್ತುವ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.